ಮಾಟ್ರಿಮೋನಿಯಲ್ ಸೈಟ್ ನಲ್ಲಿ ಭಾರಿ ಭಾರಿ ಜನ ಇರ್ತಾರೆ. ತಮಗೆ ಬೇಕಾಗುವ ಹುಡುಗನೋ ಹುಡುಗಿಯನ್ನೋ ಹುಡುಕುವವರು ಹತ್ತು-ಹಲವು ಕಂಡಿಷನ್‌ಗಳನ್ನ ಒಂದು ಹಂತಕ್ಕೆ ಹಾಕಿರುತ್ತಾರೆ. ಆದರೆ ಇಲ್ಲೊಬ್ಬ ಮಹಾರಾಯಾ ಹುಡುಗಿಯ ಎದೆ ಅಳತೆ ಇಷ್ಟಿರಬೇಕು. ಸೊಂಟದ ಅಳೆತೆ ಇಷ್ಟೇ ಇರಬೇಕು ಅಂತ ಮಾಟ್ರಿಮೋನಿಯಲ್ ಸೈಟ್ ನಲ್ಲಿ ಹಾಕಿ ತೀವ್ರ ಚರ್ಚೆಗೆ ಗುರಿಯಾಗಿದ್ದಾನೆ.
ಮಾಟ್ರಿಮೋನಿಯಲ್ ಸೈಟ್ ನಲ್ಲಿ ಎಲ್ಲ ರೀತಿಯ ಪ್ರೋಫೈಲ್ ಗಳಿರುತ್ತವೆ. ಅಂತಹದ್ರಲ್ಲಿ ಇಲ್ಲೊಬ್ಬ ತನ್ನದೇ ಕಂಡಿಷನ್ ಬರೆದಿದ್ದಾನೆ. ಹುಡುಗಿ ಎದೆ ಅಳತೆ 32 ಸೆಂಟಿಮೀಟರ್ ಇರಬೇಕು. ಹೈಟು 5'2 ರಿಂದ 5'6 ಇರೋದು ಒಳ್ಳೆಯದು. ಸೊಂಟದ ಗಾತ್ರ ತೀರ ದಪ್ಪ ಇರಲೇ ಬಾರದು ಅಂತಲೇ ಪ್ರೊಫೈಲ್ ನಲ್ಲಿ ಹಾಕಿದ್ದಾನೆ. ಮಾಟ್ರಿಮೋನಿಯಲ್ ಸೈಟ್ ನವ್ರು ಇದು ಸೈಟ್ ನ ಟರ್ಮ್ಸ್ ಅಂಡ್ ಕಂಡಿಷನ್ ಗೆ ವಿರುದ್ಧವಾಗಿದೆ. ಈ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟ್ವಿಟರ್ ನಲ್ಲಿ ಹೇಳಿದ್ದಾರೆ.
PublicNext
23/11/2021 04:11 pm