ತುಮಕೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಪತಿಯೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಕುಣಿಗಲ್ ತಾಲೂಕಿನ ಕೆಂಪಸಾಗರ ಗ್ರಾಮದಲ್ಲಿ ನಡೆದಿದೆ.
ಕೆಂಪಸಾಗರ ಗ್ರಾಮದ ಮುನಿರಾಜು(26) ಹಾಗೂ ವರಲಕ್ಷ್ಮಿ(22) ಸಾವಿಗೆ ಶರಣಾದ ದಂಪತಿ. ಮೃತ ಮುನಿರಾಜು ತಮ್ಮ ಹತ್ತಿರದ ಸಂಬಂಧಿ, ಅದೇ ಗ್ರಾಮದ ವರಲಕ್ಷ್ಮಿಯನ್ನು 4 ತಿಂಗಳ ಹಿಂದೆ ಮದುವೆಯಾಗಿದ್ದ. ಶನಿವಾರ ವರಲಕ್ಷ್ಮಿ ತನ್ನ ಪತಿಯ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗ್ರಾಮಸ್ಥರು ಕೂಡಲೇ ವಿಷಯವನ್ನು ಮುನಿರಾಜುಗೆ ತಿಳಿಸಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಆತ ಕುಣಿಗಲ್‍ನಲ್ಲೇ ವಿಷ ಕುಡಿದು ಕೆಂಪಸಾಗರದ ತೋಟಕ್ಕೆ ತೆರಳಿ ಅಲ್ಲಿ ಮರಕ್ಕೆ ನೇಣು ಬಿಗಿದುಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
21/11/2021 07:34 am