ಮಂಡ್ಯ: ಸಕ್ಕರೆ ನಾಡಿನ ಮಕ್ಕಳೂ ಈಗ ಮಾದಕ ವ್ಯಸನಿಗಳಾಗುತ್ತಿದ್ದಾರೆಯೇ ? ಈ ಪ್ರಶ್ನೆ ಈಗ ಕೇಳಿ ಬರುತ್ತಿದೆ. ಪೊಲೀಸರು ಇಲ್ಲಿ ಅಫೀಮು ಮತ್ತು ಹೆರಾಯಿನ್ ಮಾರಾಟ ಮಾಡುತ್ತಿದ್ದ ಪೆಡ್ಲರ್ ಗಳನ್ನ ಬಂಧಿಸಿ ಈ ಸ್ಪೋಟಕ ಮಾಹಿತಿ ಹೊರ ಹಾಕಿದ್ದಾರೆ.
ಮಂಡ್ಯದ ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿಯೇ ಪೆಡ್ಲರ್‌ಗಳು ಇಲ್ಲಿಗೆ ಬಂದು ಮಾದಕ ವಸ್ತು ಮಾರಾಟ ಮಾಡುತ್ತಿದ್ದರೇ ಅನ್ನೋ ಅನುಮಾನವೂ ಈಗ ವ್ಯಕ್ತವಾಗಿದೆ.ಮಂಡ್ಯದ ಫ್ಯಾಕ್ಟರಿ ಸರ್ಕಲ್ ಬಳಿಯ ಚರ್ಚ್ ರಸ್ತೆಯಲ್ಲಿಯೇ ಬೆಂಗಳೂರು ಮೂಲದ ಈ ಇಬ್ಬರನ್ನ ಪೆಡ್ಲರ್ ಗಳನ್ನ ಬಂಧಿಸಿದ್ದಾರೆ. ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
20/11/2021 02:56 pm