ಬೆಂಗಳೂರು: ಬಿಟ್ ಕಾಯಿನ್ ಆರೋಪಿ ಹ್ಯಾಕರ್ ಶ್ರೀಕಿ ಬರೋಬ್ಬರಿ -12 ಕಂಪನಿಗಳ ವೆಬ್ ಸೈಟ್‌ಗಳನ್ನ ಹ್ಯಾಕ್ ಮಾಡಿರೋ ಸತ್ಯ ಈಗ ಹೊರ ಬದ್ದಿದೆ. ಈತನ ಅಪರಾದ ಕೃತ್ಯದ ವ್ಯಾಪ್ತಿ ದೇಶ-ವಿದೇಶದಲ್ಲೂ ಹಬ್ಬಿದೆ. ಇದರಿಂದ ಅತಿ ಒತ್ತಡದಲ್ಲಿಯೇ ಇರೋ ತನಿಖಾಧಿಕಾರಿ ಚಂದ್ರಾದರ್ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು, ಈ ಪ್ರಕರಣದಲ್ಲಿ ಇಂಟರ್‌ಪೋಲ್ ಶ್ರೀಕಿ ವಿರುದ್ಧ ಕ್ರಮಕೈಗೊಳ್ಳುತವಂತೆ ಮನವಿ ಮಾಡಿದ್ದಾರೆ.
ಹ್ಯಾಕರ್ ಶ್ರೀಕ ಸದ್ಯದ ಅತಿ ದೊಡ್ಡ ಸಂಚಲನವೇ ಆಗಿದ್ದಾನೆ. ಈತನ ಬಗೆಗಿನ ಅಪರಾಧ ಕೃತ್ಯಗಳ ಪಟ್ಟಿ ಒಂದೊಂದಾಗಿಯೇ ಬಿಚ್ಚಿಕೊಳ್ಳುತ್ತಿದೆ.ಅದರಲ್ಲಿ ಈಗ ಹೊರ ಬಂದಿರೋ ಇನ್ನೂ ಒಂದು ಸತ್ಯ ಏನಪ್ಪ ಅಂದ್ರೆ, ಶ್ರೀಕಿ ದೇಶ-ವಿದೇಶದಲ್ಲಿರೋ 12 ಕಂಪನಿಗಳ ವೆಬ್ ಸೈಟ್ ಅನ್ನ ಹ್ಯಾಕ್ ಮಾಡಿರೋದು ತಿಳಿದು ಬಂದಿದೆ.
ಈ ಕಾರಣಕ್ಕೇನೆ ತನಿಖಾಧಿಕಾರಿ ಇನ್ಸಪೆಕ್ಟರ್ ಚಂದ್ರಾದರ್,ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.ಶ್ರೀಕಿ ವಿಷಯದಲ್ಲಿ ಇಂಟರ್ ಪೋಲ್ ಕ್ರಮಕೈಗೊಳ್ಳಿ ಅಂತಲೇ ಕೇಳಿದ್ದಾರೆ.ಹ್ಯಾಕರ್ ಶ್ರೀಕಿ ದೇಶ-ವಿದೇಶದಲ್ಲಿ ವಂಚನೆ ಮಾಡಿದ್ದಾರೆ. ಈತನ ಅಪರಾಧ ವ್ಯಾಪ್ತಿ ತುಂಬಾ ವಿಸ್ತಾರವಾಗಿಯೇ ಇದೆ. ಅದಕ್ಕೇನೆ ಇಂಟರ್‌ಪೋಲ್ ಇದರಲ್ಲಿ ಇನ್ವಾಲ್ವ್ ಆಗಬೇಕಿದೆ ಅನ್ನೋ ಅರ್ಥದಲ್ಲಿಯೇ ತನಿಖಾಧಿಕಾರಿ ಚಂದ್ರಾರ್,ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
PublicNext
17/11/2021 11:56 am