ನೈನಿತಾಲ್(ಉತ್ತರಾಖಂಡ್): ಅಯೋಧ್ಯೆ ತೀರ್ಪು ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಬರೆದ ಪುಸ್ತಕ ವಿವಾದದ ಕಿಡಿ ಹೊತ್ತಿಸಿದೆ. ಈ ವಿವಾದದ ನಡುವೆ ಸೋಮವಾರ ಮಧ್ಯಾಹ್ನ ಕಿಡಿಗೇಡಿಗಳು ಸಲ್ಮಾನ್ ಖುರ್ಷಿದ್ ಅವರ ನಿವಾಸಕ್ಕೆ ಬೆಂಕಿ ಹಚ್ಚಿ, ಮನೆಯ ಮುಂದಿದ್ದ ಕೆಲ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ.
ಇದರ ವಿಡಿಯೋ ಹಾಗೂ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ಸಲ್ಮಾನ್ ಖುರ್ಷಿದ್ ನಾವು ಒಂದು ದಿನ ಒಟ್ಟಿಗೆ ತರ್ಕಿಸಬಹುದು ಮತ್ತು ಹೆಚ್ಚು ಅಲ್ಲದಿದ್ದರೂ ಭಿನ್ನಾಭಿಪ್ರಾಯವನ್ನು ಒಪ್ಪಿಕೊಳ್ಳಬಹುದು ಎಂದು ನಾನು ಇನ್ನೂ ಭಾವಿಸುತ್ತೇನೆ. ನನ್ನ ಸ್ನೇಹಿತರಿಗಾಗಿ ಈಗಲೂ ವಿಶ್ವಾಸದಿಂದ ಬಾಗಿಲು ತೆರೆಯುತ್ತೇನೆ. ನಾನು ಈಗಲೂ ಇಂತಹುದು ಹಿಂದೂ ಧರ್ಮ ಎಂದು ಹೇಳುವುದು ತಪ್ಪೆ ಎಂದು ಪ್ರಶ್ನಿಸಿದ್ದಾರೆ. ಈ ಸಂಬಂಧ ರಾಕೇಶ್ ಕಪಿಲ್ ಸೇರಿದಂತೆ 20 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂಚುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಐ ನೀಲೇಶ್ ಆನಂದ್ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
PublicNext
15/11/2021 09:34 pm