ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳ ಜಗಳ : ಕಿರಿಕಿರಿ ತಾಳದೇ ಆ್ಯಸಿಡ್ ಎರಚಿದ ವೃದ್ಧ

ಬಂದಾ (ಉತ್ತರ ಪ್ರದೇಶ): ಮಕ್ಕಳು ಕ್ರಿಕೆಟ್ ಆಟವಾಡುತ್ತಿರುವ ವೇಳೆ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ಮಕ್ಕಳ ಜಗಳ ಸಹಿಸದ ವ್ಯಕ್ತಿಯೊಬ್ಬ, ಕ್ರಿಕೆಟ್ ನೋಡುತ್ತಾ ನಿಂತಿದ್ದ ಮಹಿಳೆಯರ ಮೇಲೆ ಆ್ಯಸಿಡ್ ಎರಚಿದ ವಿಕೃತ ಘಟನೆ ಉತ್ತರ ಪ್ರದೇಶದ ಬಂದಾಜಿ ಲ್ಲೆಯ ಕೈಲಾಶಪುರಿಯಲ್ಲಿ ನಡೆದಿದೆ.

60 ವರ್ಷದ ವೃದ್ಧ ಅಶುತೋಶ್ ತ್ರಿಪಾಠಿ ಅಲಿಯಾಸ್ ಗುಲ್ಲಿ ಆ್ಯಸಿಡ್ ದಾಳಿ ನಡೆಸಿದ್ದಾನೆ. ಹೌದು ಮಕ್ಕಳು ಈತನ ಮನೆಯ ಮುಂದೆ ಕ್ರಿಕೆಟ್ ಆಡುತ್ತಲೇ ಜಗಳವಾಡಿಕೊಂಡಿದ್ದಾರೆ ಈ ವೇಳೆ ಮಕ್ಕಳ ಜಗಳ ನೋಡಿ ಸುಮ್ಮನೆ ನಿಂತಿದ್ದ ಮಹಿಳೆಯರ ಮೇಲೆ ಕೋಪಿತನಾದ ಈ ವೃದ್ಧ ಆ್ಯಸಿಡ್ಎರಚಿದ್ದಾನೆ.

ಈತನ ಈ ಕೃತ್ಯಕ್ಕೆ ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By : Nirmala Aralikatti
PublicNext

PublicNext

06/11/2021 07:34 pm

Cinque Terre

46.47 K

Cinque Terre

2