ಬೆಳಗಾವಿ: ಮಗನೋರ್ವ ತನ್ನ ತಂದೆಯನ್ನೇ ಕುಡುಗೋಲಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೇಡರಹಟ್ಟಿಯಲ್ಲಿ ನಡೆದಿದೆ.
ಕಲ್ಲಪ್ಪ ಪೂಜಾರಿ(51) ಕೊಲೆಯಾದ ತಂದೆ. ಯಲ್ಲಪ್ಪ ಕೋಡೆನ್ನವರ್(35) ಕೊಲೆ ಮಾಡದ ಮಗ. ಯಲ್ಲಪ್ಪ ಕೋಡೆನ್ನವರ್ ಕುಡಿದು ಬಂದು ತನ್ನ ಪತ್ನಿಯ ಜೊತೆ ಜಗಳವಾಡುತ್ತಿದ್ದ. ಇದನ್ನು ನೋಡಲಾಗದೆ ತಂದೆ ಕಲ್ಲಪ್ಪ ಅವರು ಮಗ-ಸೊಸೆ ನಡುವಿನ ಜಗಳ ಬಿಡಿಸಲು ಹೋಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಜಗಳ ಬಿಡಿಸಲು ಬಂದ ತಂದೆಯನ್ನ ಯಲ್ಲಪ್ಪ ಕುಡುಗೋಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ನಂದಗಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ಕಲ್ಲಪ್ಪ ಪೂಜಾರಿ ಎರಡು ಮದುವೆಯಾಗಿದ್ದು, 2ನೇ ಹೆಂಡತಿಯ ಪುತ್ರ ಯಲ್ಲಪ್ಪನಿಂದ ತಂದೆ ಕಲ್ಲಪ್ಪ ಕೊಲೆ ನಡೆದಿದೆ.
PublicNext
04/11/2021 02:39 pm