ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗರ್ಲ್ ಫ್ರೆಂಡ್, ಖುಷಿಪಡಿಸಲು ಸ್ಯಾಲರಿ ಸಾಲದೆ ಕಳ್ಳತನಕ್ಕಿಳಿದ ಎಂಜನಿಯರ್!

ನಾಗ್ಪುರ : ಪ್ರೇಯಸಿಯನ್ನು ಅತ್ಯಂತ ಖುಷಿಯಿಂದ ನೋಡಿಕೊಳ್ಳುವ ಹಮ್ಮಸ್ಸಿನಲ್ಲಿ ಸಿವಿಲ್ ಇಂಜಿನಿಯರ್ ಒಬ್ಬ ತನ್ನ ಸ್ಯಾಲರಿ ಸಾಕಾಗದೇ ಕಳ್ಳತನಕ್ಕೆ ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ.ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ತನ್ನ ಐಷಾರಾಮಿ ಜೀವನಕ್ಕೆ ಗೆಳತಿ ಜೊತೆ ಸುತ್ತಾಡಲು ಸರಗಳ್ಳತನಕ್ಕೆ ಇಳಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಏಕಾಂಗಿಯಾಗಿ 36 ಸರಗಳ್ಳತನ ಮಾಡಿ ಸುಲಭವಾಗಿ ಲಕ್ಷ ಲಕ್ಷ ರೂಪಾಯಿ ಆದಾಯ ಪಡೆದ ಉಮೇಶ್ ಪಾಟೀಲ್, ಹೆಸರಿಗೆ ಮಾತ್ರ ಸಿವಿಲ್ ಎಂಜಿನಿಯರಿಂಗ್. ಈತನ ನಡೆ ಗಮನಿಸಿದ ಪೊಲೀಸರು ಉಮೇಶ್ ಪಾಟೀಲ್ ಬೈಕ್ ಹಿಂಬಾಲಿಸಿದ್ದಾರೆ. ವಾಹನ ಅಡ್ಡಗಡಿ ನೆಲಕ್ಕುರಳಿಸಿದ್ದಾರೆ.

ಉಮೇಶ್ ಪಾಟೀಲ್ ಮನೆಗೆ ತೆರಳಿದ ಪೊಲೀಸರು 2.5 ಲಕ್ಷ ರೂಪಾಯಿ ನಗದು ಹಾಗೂ 27 ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ. ಸರಗಳ್ಳತನ ಮಾಡಿದ ಹಣದಿಂದ 45 ಲಕ್ಷ ರೂಪಾಯಿ ನೀಡಿ ಫ್ಯಾಟ್ ಖರೀದಿಸಿದ್ದ. ಇತ್ತ ಈತನ ಖಾತೆಯಲ್ಲಿ 20 ಲಕ್ಷ ರೂಪಾಯಿ ಬ್ಯಾಲೆನ್ಸ್ ಕೂಡ ಪತ್ತೆಯಾಗಿದೆ.

ಗೆಳತಿ ಜೊತೆ ಸುತ್ತಾಡಲು, ಐಷಾರಾಮಿ ಜೀವನಕ್ಕೆ ವೇತನ ಸಾಲುತ್ತಿರಲಿಲ್ಲ. ಹೀಗಾಗಿ ಸರಗಳ್ಳತನಕ್ಕೆ ಇಳಿದಿರುವುದಾಗಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾರೆ.

Edited By : Nirmala Aralikatti
PublicNext

PublicNext

02/11/2021 05:43 pm

Cinque Terre

29.81 K

Cinque Terre

2