ಕೊರೊನಾ ಹರಡುವುದನ್ನು ತಡೆಯಲು ಮಾಸ್ಕ್ ಹಾಕುವುದು ಅಗತ್ಯವಾಗಿದೆ. ಆದರೆ ರೆಸ್ಟೋರೆಂಟ್‌ವೊಂದರಲ್ಲಿ ಮಾಸ್ಕ್ ವಿಚಾರಕ್ಕೆ ಕಿರಿಕ್ ಆಗಿದ್ದು, ಪಂಚ್‌ನೊಂದಿಗೆ ಜಗಳ ಅಂತ್ಯಗೊಂಡಿದೆ.
ಹೌದು. ಮಾಸ್ಕ್ ಧರಿಸಿಲ್ಲ. ಹೀಗಾಗಿ ನಿಮಗೆ ಪ್ರವೇಶವಿಲ್ಲ. ಇಲ್ಲವೇ ಮಾಸ್ಕ್ ಧರಿಸಿ ಎಂದು ರೆಸ್ಟೋರೆಂಟ್ ಕೆಲಸಗಾರರು ಹೇಳಿದ್ದಾರೆ. ಅದಕ್ಕೆ ಕೋಪಗೊಂಡ ಗ್ರಾಹಕ, ಅಸಭ್ಯ ಪದ ಬಳಸಿ ಕೂಗಾಡಿದ್ದಾನೆ. ಈ ವೇಳೆ ವಯಸ್ಕನೋರ್ವ ಓಡಿ ಬಂದು ಕೂಗಾಡುತ್ತಿದ್ದ ಗ್ರಾಹಕನ ಮುಖಕ್ಕೆ ಪಂಚ್ ಕೊಟ್ಟಿದ್ದಾನೆ. ಇದರಿಂದ ಕೆಳಗೆಬಿದ್ದ ಗ್ರಾಹಕ ಎದ್ದು ಬಾಗಿಲು ತೆಗೆದು ಹೊರ ನಡೆದಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ಫುಲ್ ವೈರಲ್ ಆಗಿದೆ.
PublicNext
27/10/2021 09:26 pm