ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳಿಗೆ ಬೆಂಕಿ ಹಚ್ಚಿ ತಾನು ಬೆಂದು ಹೋದ ತಾಯಿ : 3 ದಿನದಲ್ಲಿ 3 ಕೇಸ್

ಕಲಬುರಗಿ : ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ಬಳಿಕ ತಾಯಿ ಕೂಡ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಪಂಚಶೀಲ ನಗರದಲ್ಲಿ ನಡೆದಿದೆ. ಇನ್ನು ತಾಯಿ ಬೆಂಕಿ ಹಚ್ಚಲು ಮುಂದಾದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಮಕ್ಕಳನ್ನು ಆಟಿಕೆ ವಸ್ತುಗಳಿಗೆ ಕಟ್ಟಿ ಸೀಮೆ ಎಣ್ಣೆ ಸುರಿದು ಸುಟ್ಟು ಹಾಕಿದ್ದಾರೆ. ಬಳಿಕ ತಾವು ಬೆಂಕಿ ಹಚ್ಚಿಕೊಂಡಿದ್ದಾರೆ.

ತಾಯಿ ದೀಕ್ಷಾ 26 , ಮಗಳು ಸಿಂಚನ (2) ಹಾಗೂ ಮಗ ಧನಂಜಯ್ (3) ಮೃತ ದುರ್ದೈವಿಗಳು. ಗಂಡ ಅತ್ತೆ ಮಾವನ ಕಿರುಕುಳಕ್ಕೆ ಬೇಸತ್ತ ಗೃಹಿಣಿಯ ಈ ನಿರ್ಧಾರ ನಿಜಕ್ಕೂ ಭಯಾನಕವಾಗಿದೆ. ಇನ್ನು ಕಲಬುರಗಿ ಜಿಲ್ಲೆಯಲ್ಲಿ ಮೂರು ದಿನದಲ್ಲಿ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಮೂರು ಪ್ರಕರಣಗಳು ದಾಖಲಾಗಿವೆ.

1) ಮಾಡ್ಯಾಳ್ ಗ್ರಾಮದಲ್ಲಿ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

2) ಶಹಬಾದ್ನಲ್ಲಿ ಪುಟ್ಟ ಮಗುವಿನೊಂದಿಗೆ ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ

3) ಪಂಚಶೀಲ ನಗರದಲ್ಲಿ ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ

ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
PublicNext

PublicNext

26/10/2021 09:39 am

Cinque Terre

55.44 K

Cinque Terre

10