ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ವ್ಯಕ್ತಿಯೋರ್ವನ ಮೇಲೆ ಸಿನಿಮೀಯ ರೀತಿ ಅಟ್ಯಾಕ್.!

ಗದಗ: ಸಿನಿಮೀಯ ರೀತಿಯಲ್ಲಿ ನಾಲ್ಕು ಜನ ಯುವಕರ ತಂಡವೊಂದು ಕಾರಿನಲ್ಲಿ ಬಂದು ಓರ್ವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಎಸ್ಕೇಪ್ ಆದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ನಡೆದಿದೆ.

ನೂರ್‌ಅಹ್ಮದ್ ಮಕಾಂದಾರ್ ಹಲ್ಲೆಗೆ ಒಳಗಾದ ವ್ಯಕ್ತಿ. ಘಟನೆಗೆ ಆಸ್ತಿವಿವಾದ ಮತ್ತು ಹಳೆಯ ವೈಷಮ್ಯವೇ ಕಾರಣ ಎನ್ನಲಾಗುತ್ತಿದೆ. ಅಬ್ದುಲ್, ನಿಜಾಮ್, ಅಜ್ಜು ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ನೂರ್‌ಅಹ್ಮದ್ ಆರೋಪಿಸಿದ್ದಾರೆ.

ನೂರ್‌ಅಹ್ಮದ್ ಲಕ್ಷ್ಮೇಶ್ವರ ಪಟ್ಟಣದ ಪಶು ಆಸ್ಪತ್ರೆ ಬಳಿ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ. ಈ ವೇಳೆಯಲ್ಲಿ ಕಾರಿನಲ್ಲಿ ಬಂದ ನಾಲ್ವರು ಏಕಾಏಕಿ ಆತನ ಎರಡು ಕಾಲುಗಳ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ನೂರ್‌ಅಹ್ಮದ್ ಸ್ಥಳದಲ್ಲಿಯೇ ಕುಸಿದು ಬಿದ್ದು ಅರೆ ಪ್ರಜ್ಞಾವಸ್ಥೆ ತಲುಪಿದ್ದರಿಂದ ಬಿಟ್ಟು ಪರಾರಿಯಾಗಿದ್ದಾರೆ.

ಹೆಚ್ಚಿನ ಚಿಕಿತ್ಸೆಗಾಗಿ ನೂರ್‌ಅಹ್ಮದ್‌ನನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಗದಗ ಜಿಲ್ಲೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗೆ ಪೊಲೀಸರು ಬಲೆ ಬಿಸಿದ್ದಾರೆ.

Edited By : Vijay Kumar
PublicNext

PublicNext

24/10/2021 02:13 pm

Cinque Terre

33.76 K

Cinque Terre

1

ಸಂಬಂಧಿತ ಸುದ್ದಿ