ಬೆಂಗಳೂರು:ಆಟೋ ಚಾಕಲನಕೊಬ್ಬ ಬಿರಿಯಾನಿ ತಿನ್ನಲು ಹೋಗಿ ಬಳಿ ಇದ್ದ ಎರಡು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಬ್ಯಾಡರಳ್ಳಿಯಲ್ಲಿ ಈ ಘಟನೆ ನಡಿದೆ. ಆಟೋ ಚಾಲಕ ಪೊಲೀಸರಿಗೂ ದೂರು ಕೊಟ್ಟಿದ್ದಾರೆ. ಆದರೆ 2 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರು ಹೇಗೆ ಅನ್ನೋ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಆಟೋ ಚಾಲಕನ ಹೆಸರು ಹನುಮಂತರಾಯ. ಬ್ಯಾಂಕ್ ಅಲ್ಲಿ ಸಾಲ ಮಾಡಿದ್ದರು. ಅದನ್ನ ತೀರಿಸಲು ಚಿನ್ನವನ್ನ ಅಡ ಇಟ್ಟು 2 ಲಕ್ಷ ರೂಪಾಯಿ ಯನ್ನೂ ಪಡೆದಿದ್ದರು. ಆದರೆ ಬಾಮೈದನ ಜೊತೆಗೆ ಬೈಕ್ ಏರಿ ಬರುವಾಗ ದಾರಿ ಮಧ್ಯೆ ಬಿರಿಯಾನಿ ತಿನ್ನಲು ನಿಲ್ಲಿಸಿದ್ದಾರೆ. ಬೈಕ್ ಗೆ ಇದ್ದ ಸೈಡ್ ಲಾಕರ್ ನಲ್ಲಿ 2 ಲಕ್ಷ ದುಡ್ಡನ್ನೂ ಇಟ್ಟಿದ್ದಾರೆ. ಅದನ್ನ ಹಾಗೆ ಬಿಟ್ಟು ಬಿರಿಯಾನಿ ತಿನ್ನಲು ಹೋಗಿದ್ದಾರೆ.
ಅಷ್ಟೇ ನೋಡಿ, ವಾಪಾಸ್ ಬಂದು ನೋಡಿದ್ರೆ ಬೈಕ್ ನ ಸೈಡ್ ಲಾಕರ್ ನಲ್ಲಿ ದುಡ್ಡೇ ಇಲ್ಲ. ತಕ್ಷಣವೇ ಪಕ್ಕದಂಗಡಿಯಲ್ಲಿದ್ದ ಸಿಸಿಟಿವಿ ಚೆಕ್ ಮಾಡಿದ್ದಾರೆ. ಬೈಕ್ ಹತ್ತಿರ ಸಾಮಾನ್ಯನ ರೀತಿಯಲ್ಲಿಯೇ ಬಂದ ವ್ಯಕ್ತಿ ದುಡ್ಡು ಕದ್ದುಕೊಂಡು ಹೋಗಿದ್ದಾನೆ ಅಂತ ತಿಳಿದಿದೆ. ಅದನ್ನ ಇಟ್ಟುಕೊಂಡೆ ಹುನಮಂತರಾಯ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
PublicNext
23/10/2021 01:35 pm