ಬೆಂಗಳೂರು: ಮನೆಗೆ ನುಗ್ಗಿ ವಿವಾಹಿತ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬನಶಂಕರಿ ಠಾಣಾ ವ್ಯಾಪ್ತಿಯ ಯಾರಬ್ ನಗರದಲ್ಲಿ ನಡೆದಿದೆ.
ಯಾರಬ್ ನಗರದಲ್ಲಿ ವಾಸವಿದ್ದ 28 ವರ್ಷದ ಆಫ್ರೀನ್ ಖಾನಂ ಕೊಲೆಯಾದ ಮಹಿಳೆ. ಆಫ್ರೀನ್ ಖಾನಂ ಪತಿ ಟಿಂಬರ್ ಯಾರ್ಡ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಖಾನಂ ಪತಿ ಎಂದಿನಂತೆ ಸೋಮವಾರ ಕೆಲಸಕ್ಕೆ ಹೋಗಿದ್ದು, ಮಹಿಳೆ ಒಬ್ಬರೇ ಮನೆಯಲ್ಲಿದ್ದರು. ಸಂಜೆ ಪರಿಚಿತ ವ್ಯಕ್ತಿ ಮನೆಗೆ ಬಂದು ಹತ್ಯೆಗೈದು, ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾನೆ.
ನಿನ್ನೆ (ಸೋಮವಾರ) ರಾತ್ರಿ ಖಾನಂ ಪತಿ ಮನೆಗೆ ಬಂದು ಮನೆಗೆ ಹಾಕಿದ್ದ ಬೀಗ ಒಡೆದು ಒಳಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
PublicNext
20/10/2021 11:10 am