ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿವಾಹಿತೆ ಮೇಲೆ ಐವರು ಕಾಮುಕರಿಂದ ಒಂದು ವಾರ ನಿರಂತರ ರೇಪ್.!

ಪಾಟ್ನಾ: ವಿವಾಹಿತ ಮಹಿಳೆ ಮೇಲೆ ಐವರು ಪುರುಷರು ಒಂದು ವಾರ ನಿರಂತರ ಸಾಮೂಹಿಕ ಅತ್ಯಾಚಾರ ನಡೆಸಿದ ವಿಕೃತ ಘಟನೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದಿದೆ. ಸದ್ಯ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯು ತನ್ನ ಪತಿಯೊಂದಿಗೆ ಜಗಳವಾಡಿ ಅಕ್ಟೋಬರ್ 10ರಂದು ಮನೆಯನ್ನು ಬಿಟ್ಟು ಹೋಗಿದ್ದರು. ಬಳಿಕ ಮಹಿಳೆ ರೈಲಿನಲ್ಲಿ ಕೋಲ್ಕತ್ತಾಗೆ ಹೋಗಲು ನಿರ್ಧರಿಸಿ, ಪಾಟ್ನಾ ಜಂಕ್ಷನ್‌ಗೆ ಬಂದಿದ್ದಾರೆ. ಅಲ್ಲಿಂದ ಸಮೀಪದ ಹೋಟೆಲ್‌ಗೆ ಹೋಗಿ, ಮಾಲೀಕನಿಗೆ ಕೋಲ್ಕತ್ತಾಗೆ ಹೋಗುವ ರೈಲಿನ ಬಗ್ಗೆ ಮಾಹಿತಿ ಕೇಳಿದ್ದಾರೆ.

ಹೋಟೆಲ್ ಮಾಲೀಕ ಗೋಪಾಲ್ ತನ್ನ ಸ್ನೇಹಿತ ಅಮಿತ್‌ಗೆ ಮಹಿಳೆಯ ಬಗ್ಗೆ ಹೇಳಿದ್ದಾನೆ. ಬಳಿಕ ಇಬ್ಬರೂ ಆಕೆಯನ್ನು ಅಜಯ್ ಎಂಬುವವನ ಬಳಿ ಕರೆದುಕೊಂಡು ಹೋಗಿದ್ದಾರೆ. ಅವರು ಕಾರ್ಬಿಗಾಹಿಯಾ ಎಂಬ ಪ್ರದೇಶದ ಒಂದು ಕೊಠಡಿಯಲ್ಲಿ ರೈಲು ಬರುವವರೆಗೆ ಕಾಯುವಂತೆ ಮಹಿಳೆಗೆ ಹೇಳಿದ್ದಾರೆ. ನಂತರ ಅದೇ ಕೊಠಡಿಯಲ್ಲಿ ಮಹಿಳೆಯನ್ನು ಕೂಡಿ ಹಾಕಿದ ಕಾಮುಕರು ಒಂದು ವಾರ (ಅಕ್ಟೋಬರ್ 17ರ ರಾತ್ರಿಯವರೆಗೆ) ನಿರಂತರ ಅತ್ಯಾಚಾರ ಎಸಗಿದ್ದಾರೆ.

ಪತ್ನಿ ಕೋಲ್ಕತ್ತಾ ತಲುಪದ ಮಾಹಿತಿ ಪಡೆದ ಆಕೆಯ ಪತಿ ಜಕ್ಕನಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮಹಿಳೆಯ ಮೊಬೈಲ್ ಟವರ್ ಪರಿಶೀಲಿಸಿದ್ದು, ಅದು ಪಾಟ್ನಾ ಜಂಕ್ಷನ್ ಆಕೆಯ ಕೊನೆಯ ಸ್ಥಳವೆಂದು ತೋರಿಸಿದೆ. ಸ್ಥಳೀಯ ಗುಪ್ತಚರ ಮಾಹಿತಿ ಆಧಾರದ ಮೇಲೆ ಮಹಿಳೆ ಇರುವ ಮನೆಯನ್ನು ಪತ್ತೆಹಚ್ಚಿದ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ.

Edited By : Vijay Kumar
PublicNext

PublicNext

20/10/2021 08:23 am

Cinque Terre

89.33 K

Cinque Terre

11