ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೋನ್ ಕದ್ದಾಲಿಕೆ ಪ್ರಕರಣ: ಎಡಿಜಿಪಿ ಅಲೋಕ್ ಕುಮಾರ್ ಗೆ ಮತ್ತೆ ಟೆನ್ಷನ್

ಬೆಂಗಳೂರು: ಎಡಿಜಿಪಿ ಅಲೋಕ್ ಕುಮಾರ್ ಪೋನ್ ಟ್ಯಾಪಿಂಗ್ ಪ್ರಕರಣಕ್ಕೆ ಮರು ಜೀವ ಬಂದಿದೆ. ಮತ್ತೆ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಸಿಬಿಐ ವಿಶೇಷ ನ್ಯಾಯಾಲಯ ಈಗ ಆದೇಶ ನೀಡಿದೆ.

ಇದು 2018 ರ ಕಥೆ. ಆಗ ಮೈತ್ರಿ ಸರ್ಕಾರ ಇತ್ತು. ಎಚ್ಡಿಕೆ ಮುಖ್ಯಮಂತ್ರಿ ಆಗಿದ್ದರು.ಆಗ ಅಲೋಕ್ ಕುಮಾರ್ ರಾಜಕಾರಣಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಪೋನ್ ಕರೆಗಳನ್ನ ಕದ್ದು ಆಲಿಸಿದ್ದರು ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಸೇರಿ ಹಲವು ಶಾಸಕರು ಆರೋಪಿಸಿದ್ದರು.ಈ ಸಮಯದಲ್ಲಿಯೇ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರ ಪೋನ್ ಅನ್ನೂ ಕದ್ದು ಆಲಿಸಿದ್ದರು ಅಲೋಕ್ ಕುಮಾರ್ ಎನ್ನಲಾಗಿದೆ.ಇದಾದ ಬಳಿಕ ಬಿ.ಎಸ್.ಯಡಿಯೂರಪ್ಪನವ್ರು ಈ ಪ್ರಕರಣವನ್ನ ಸಿಬಿಐಗೆ ಕೊಟ್ಟರು.

ಆದರೆ,ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ಅಲೋಕ್ ಕುಮಾರ್ ಸಂಬಂಧಿಸಿದಂತೆ ಬಿ-ರಿಪೋರ್ಟ್ ಹಾಕಿದರು.ಅದನ್ನ ಪ್ರಶ್ನಿಸಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಈಗ ಅದನ್ನ ನ್ಯಾಯಾಲಯ ವಜಾ ಮಾಡಿದೆ. ಸಿಬಿಐ ಅಲೋಕುಮಾರ್ ಅವರಿಗೆ ಹಾಕಿದ್ದ ಬಿ-ರಿಪೋರ್ಟ್ ಅನ್ನು ಕೂಡ ರದ್ದುಗೊಳಿಸಿ,ಮತ್ತೊಮ್ಮೆ ತನಿಖೆ ನಡೆಸಿ ವರದಿಕೊಡುವಂತೆ ಆದೇಶ ಕೊಟ್ಟಿದೆ. ಇದರಿಂದ ಅಲೋಕ್ ಕುಮಾರ್ ಅವರಿಗೆ ಮತ್ತೆ ಟೆನ್ಷನ್ ಶುರು ಆದಂತೆ ಆಗಿದೆ

Edited By :
PublicNext

PublicNext

18/10/2021 08:54 pm

Cinque Terre

52.88 K

Cinque Terre

1