ಬೆಂಗಳೂರು : ನಿತ್ಯ ಹತ್ತಾರು ಕೊಲೆ ಕೇಸ್ ಗಳನ್ನು ನಾವು ನೀವೆಲ್ಲಾ ನೋಡುತ್ತಿರುತ್ತೇವೆ. ಆದ್ರೆ ಈ ಕೇಸ್ ಕೊಂಚ ಭಯಾನಕವಾಗಿದೆ. ಹೌದು ಅಕ್ಕನ ಬಾಯ್ ಫ್ರೆಂಡ್ ನನ್ನು ಕೊಂದ ತಮ್ಮ ಆಟೋದಲ್ಲಿ ಶವ ಹೊತ್ತು ಪೊಲೀಸ ಠಾಣೆಗೆ ಆಗಮಿಸಿ ಸಾರ್ ಕೊಲೆ ಮಾಡಿ ಬಾಡಿ ತಂದಿದ್ದೇನೆ ಸಾರ್ ಎಂದಿದ್ದಾನೆ.
ಹೌದು 24 ವರ್ಷದ ಭಾಸ್ಕರ್ ಎನ್ನುವವನನ್ನು ಆರೋಪಿ ಮುನಿರಾಜು ಎನ್ನುವವನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ. ಮುನಿರಾಜು ಮತ್ತೆ ಅವನ ಅಕ್ಕ ಮೂಲತಃ ಮಾಲೂರಿನವರು ಅಕ್ಕನ ಸಂಸಾರದಲ್ಲಿ ಬಿರುಕು ಉಂಟಾಗಿದ್ದರಿಂದ ಮಾಲೂರಿನಿಂದ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರಕ್ಕೆ ಬಂದು ವಾಸವಾಗಿದ್ದರು.
ಇಬ್ಬರು ಮಕ್ಕಳೊಂದಿಗೆ ಮುನಿರಾಜುವಿನ ಅಕ್ಕ ಬದುಕು ನಡೆಸಿದ್ದಳು ಈ ನಡುವೆ ಅಕ್ಕನ ಬಾಯ್ ಫ್ರೆಂಡ್ ಗಾರ್ಮೆಂಟ್ ಸೂಪರ್ವೈಸರ್ ಭಾಸ್ಕರ್ ಮನೆಗೆ ಬರಲಾರಂಭಿಸಿದ್ದ ಮಾತ್ರವಲ್ಲದೆ ಗರ್ಲ್ ಫ್ರೆಂಡ್ ಮತ್ತು ಮಕ್ಕಳಿಗೆ ಪ್ರತ್ಯೇಕ ಮನೆ ಮಾಡುವುದಾಗಿ ಹೇಳಿದ್ದ ಇತ್ತ ಅಕ್ಕ ಕೂಡಾ ಪ್ರಿಯಕರನೊಂದಿಗೆ ಹೋಗಲು ಅಣಿಯಾಗಿದ್ದಳು.
ಆದ್ರೆ ಅಕ್ಕನ ಹಿರಿಯಮಗ ತಾಯಿಯೊಂದಿಗೆ ಹೋಗಲು ನಿರಾಕರಿಸಿ ಸೋದರ ಮಾವನಿಗೆ ತಾಯಿಯ ವೃತ್ತಾಂತ ಬಿಚ್ಚಿಟ್ಟದ್ದ ಬಾಲಕನ ಮಾತು ಕೇಳುತ್ತಿದ್ದಂತೆ ಕೆಲ ಸಹಚರರೊಂದಿಗೆ ಮನೆಗೆ ಬಂದ ಮುನಿರಾಜು ಆ್ಯಂಡ್ ಗ್ಯಾಂಗ್ ಭಾಸ್ಕರ್ ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ.
ಭಾಸ್ಕರ್ ಹಸಿವು ಎಂದಾಗ ಎಗ್ ರೈಸ್ ತಿನ್ನಿಸಿ ಮತ್ತೆ ಹಲ್ಲೆ ನಡೆಸಿದ ಮುನಿರಾಜು ಅಂಡ್ ಗ್ಯಾಂಗ್ ತಲೆಗೆ ತೀವ್ರ ಪೆಟ್ಟು ಬಿದ್ದು ಮೂರ್ಛೆ ಹೋದ ಭಾಸ್ಕರ್ ನನ್ನು ನಿರ್ಲಕ್ಷಿಸಿ ಹಂತಕರು ಮರಳಿದ್ದರು.ತದನಂತರ ಪರಿಶೀಲಿಸಿದಾಗ ಭಾಸ್ಕರ್ ಮೃತಪಟ್ಟಿರೋದು ಖಚಿತವಾಗಿದೆ.
ಸದ್ಯ ಆರೋಪಿ ಮುನಿರಾಜು, ಮಾರುತಿ, ನಾಗೇಶ್ ಪ್ರಶಾಂತ್ ಬಂಧನವಾಗಿದ್ದುಎಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
17/10/2021 10:29 am