ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

17 ವರ್ಷದ ಯುವತಿ ಮೇಲೆ ಅತ್ಯಾಚಾರ ; ಏಳು ಮಂದಿ ಅರೆಸ್ಟ್

ಲಖನೌ: ಆ ಬಾಲೆ ಇನ್ನು ಬಾಳಿ ಬದುಕಬೇಕಾದ ಚಿಗುರು ಆದ್ರೆ ನರರಾಕ್ಷಸರ ಕೈಯಲ್ಲಿ ನಲುಗಿದ್ದಾಳೆ. ಮೃಗಗಳಂತೆ ಎರಗಿದ ದುರುಳರು ಲಲಿತ್ ಪುರದಲ್ಲಿ 17 ವರ್ಷದ ಯುವತಿ ಮೇಲಿನ ಅತ್ಯಾಚಾರ ಮಾಡಿದ್ದಾರೆ.ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷರು ಸೇರಿದಂತೆ ಇಲ್ಲಿಯವರೆಗೂ ಏಳು ಮಂದಿಯನ್ನು ಬಂಧಿಸಲಾಗಿದೆ.

ನಗರದ ವಿವಿಧ ಕಡೆಗಳಲ್ಲಿ ಐದು ವರ್ಷ ತಮ್ಮ ಮೇಲೆ ಅತ್ಯಾಚಾರವಾಗಿರುವುದಾಗಿ ಯುವತಿ ನೀಡಿದ ದೂರಿನ ಆಧಾರದ ಮೇಲೆ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ನಿಖಿಲ್ ಪಠಕ್ ಹೇಳಿದ್ದಾರೆ. ಮೂವರು ಅಪರಿಚಿತರು ಸೇರಿದಂತೆ 25 ಜನರ ಹೆಸರನ್ನು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಳು.

ಸಂತ್ರಸ್ತೆಯ ತಂದೆ, ಚಿಕ್ಕಪ್ಪ ಸೇರಿದಂತೆ 25 ಮಂದಿ ವಿರುದ್ಧ ಅಕ್ಟೋಬರ್ 12 ರಂದು ಸದಾರ್ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

Edited By : Nirmala Aralikatti
PublicNext

PublicNext

16/10/2021 06:50 pm

Cinque Terre

65.88 K

Cinque Terre

4