ಬೆಳಗಾವಿ: ಸರಕಾರಿ ಆಸ್ಪತ್ರೆಯ ಕಾಂಪೌಂಡ್ ಒತ್ತುವರಿ ತೆರವುಗೊಳಿಸಲು ಹೋಗಿದ್ದ ಪಿಡಿಒ ಮೇಲೆ ಹಲ್ಲೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪಿಡಿಒ ವೀರಭದ್ರ ಗುಂಡಿ ಎಂಬುವವರ ಮೇಲೆ ಗ್ರಾಮದ ಸಿದ್ದಪ್ಪ ಹುಲಕುಂದ, ಯಮನಪ್ಪಾ ಹುಲಕುಂದ, ವೆಂಕಪ್ಪ ಹುಲಕುಂದ ಎಂಬುವವರಿಂದ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆ ಮಾಡುತ್ತಿರುವ ವಿಡಿಯೋ ಮೊಬೈಲ್ ನಲ್ಲಿ ಸೆರೆ ಹಿಡಿಯಲು ಮುಂದಾಗುತ್ತಿದ್ದಂತೆ ಬಾಳವ್ವಾ ಹುಲಕುಂದ ಎಂಬ ಮಹಿಳೆಯಿಂದ ಹೈಡ್ರಾಮಾ ಶುರುವಾಗಿದೆ. ಮಹಿಳೆ ತಾನಾಗಿಯೇ ಸೀರೆ ಹರಿದು ಕೊಂಡು ನನ್ನನ್ನು ಎಳೆದಾಡಿದ್ದಿಯಾ ಎಂದು ಪಿಡಿಒಗೆ ಅವಾಜ್ ಹಾಕಿದ್ದಾಳೆ. ಮತ್ತು ಮಹಿಳೆ ತಾನೇ ಸೀರೆ ಹರಿದುಕೊಂಡ ವಿಡಿಯೋ ಸೆರೆಯಾಗಿದೆ.
ಘಟನೆ ನಡೆದ ನಂತರ ಪಿಡಿಒಗೆ ಬಾಲಚಂದ್ರ ಜಾರಕಿಹೊಳಿ ಆಪ್ತ ಸಿದ್ದಪ್ಪ ಹಮ್ಮನವರ ಎಂಬುವವರು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಈ ಎಲ್ಲ ಘಟನಾವಳಿ ಬಗ್ಗೆ ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಪೊಲೀಸರು ಯಾರನ್ನೂ ಬಂಧಿಸದೇ ಇರುವುದು ತುಕ್ಕಾನಟ್ಟಿ ಗ್ರಾಮಸ್ಥರಲ್ಲಿ ಅನುಮಾನ ಮೂಡಿಸಿದೆ.
PublicNext
16/10/2021 04:30 pm