ರಾಂಚಿ: ವೇಗವಾಗಿ ಬಂದ ಎಸ್ಯುವಿ ಕಾರ್ ಒಂದು ದಸರಾ ಸಂಭ್ರಮದಲ್ಲಿ ಮೆರವಣಿಗೆ ಹೊರಟಿದ್ದ 20ಕ್ಕೂ ಹೆಚ್ಚು ಜನರ ಮೇಲೆ ಹರಿದ ಭೀಕರ ಘಟನೆ ಛತ್ತೀಸಗಡದ ಜಶ್ಪುರ್ನಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ.
ಕಾರ್ ಗುಂಪಿನ ಮೇಲೆ ಹರಿದ ದೃಶ್ಯವು ವಿಡಿಯೋದಲ್ಲಿ ಸೆರೆಯಾಗಿದೆ. ಕಾರ್ ಗುಂಪಿನ ಮೇಲೆ ಹರಿಯಲು ಕಾರಣವೇನು? ಕಾರ್ ಯಾರಿಗೆ ಸೇರಿದ್ದು.? ಘಟನೆಯಲ್ಲಿ ಎಷ್ಟು ಜನ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಈ ದುರ್ಘಟನೆಯಿಂದ ಕೆರಳಿದ ಜನರು ಕಾರ್ಗೆ ಬೆಂಕಿಹಚ್ಚಿದ್ದಾರೆ. ಇನ್ನು ಕಾರ್ನಲ್ಲಿ ಡ್ರಗ್ಸ್ ಪತ್ತೆಯಾಗಿದೆ ಎಂದು ಹೇಳಲಾಗಿದೆ.
PublicNext
15/10/2021 06:03 pm