ಮಂಗಳೂರು : ನಗರದ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಮಗುವನ್ನು ಅದಲು ಬದಲು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು ಡಿಸ್ಚಾರ್ಜ್ ವೇಳೆ ಆಸ್ಪತ್ರೆ ಸಿಬ್ಬಂದಿ ಗಂಡು ಮಗು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಸೆಪ್ಟಂಬರ್ 28 ರಂದು ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿ ಅಂಬ್ರೀನ್ ಅವರಿಗೆ ಮಂಗಳೂರಿನ ಲೇಡಿಗೋಶನ್ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು. ಆಸ್ಪತ್ರೆಯಲ್ಲಿ ಇದ್ದಷ್ಟು ದಿನ ಮಗುವನ್ನು ತೋರಿಸಲು ಸಿಬ್ಬಂದಿಗಳು ನಿರಾಕರಿಸಿದ್ದರು ಹಾಗೂ 18 ದಿನಗಳ ಕಾಲ ಮಗು ಐಸಿಯುನಲ್ಲಿತ್ತು ನಿನ್ನೆ ಆಸ್ಪತ್ರೆಯಿಂದ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದ್ದು ಹೆಣ್ಣು ಮಗುವಿಗೆ ಬದಲು ಗಂಡು ಮಗು ಕೊಟ್ಟಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಮಗುವಿಗೆ ಮಲ ವಿಸರ್ಜನೆ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದಾಗ ಹೆಚ್ಚಿನ ಚಿಕಿತ್ಸೆಗಾಗಿ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಿ ಚಿಕೆತ್ಸೆ ಕೊಡಲಾಗಿತ್ತು. ಅದರೆ ಆ ಆಸ್ಪತ್ರೆಯಲ್ಲಿ ಮಗುವನ್ನು ನೋಡಿ ಪೋಷಕರು ಆಶ್ಚರ್ಯಗೊಂಡಿದ್ದಾರೆ. ಯಾಕಂದ್ರೆ ಅಲ್ಲಿ ಹೆಣ್ಣು ಮಗು ಬದಲಿಗೆ ಗಂಡು ಮಗುವಿಗೆ ಚಿಕಿತ್ಸೆ ಕೊಡಲಾಗುತ್ತಿತ್ತು.ಸರಕಾರಿ ಆಸ್ಪತ್ರೆಯಲ್ಲಿ ಯೇ ಮಗುವನ್ನು ಬದಲಾವಣೆ ಮಾಡಿ ಮಹೇಶ್ ಆಸ್ಪತ್ರೆಗೆ ಕಳುಹಿಸಿದ್ದಾರೆಂದು ಸಂಶಯಿಸಿ ಪೋಷಕರು ವಾಪಸ್ ಮಂಗಳೂರು ಆಸ್ಪತ್ರೆಗೆ ಮಗುವನ್ನು ಕರೆ ತಂದು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಅಲ್ಲದೇ ನ್ಯಾಯಕ್ಕಾಗಿ ಮಗುವಿನ ತಂದೆ ಮುಸ್ತಫಾ ಬಂದರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
PublicNext
15/10/2021 12:47 pm