ಲಕ್ನೋ: 17ರ ಬಾಲಕಿ ಮೇಲೆ ತಂದೆ, ಬಹುಜನ ಸಮಾಜ ಪಕ್ಷ (ಬಿಎಸ್‌ಬಿ), ಸಮಾಜವಾದಿ ಪಕ್ಷ (ಎಸ್‌ಪಿ) ಜಿಲ್ಲಾಧ್ಯಕ್ಷರು ಸೇರಿ 28 ಜನರು ಸುಮಾರು ವರ್ಷಗಳಿಂದ ನಿರಂತರ ಅತ್ಯಾಚಾರ ಎಸಗಿದ ಆಘಾತಕಾರಿ, ಅಮಾನವೀಯ ಕೃತ್ಯ ಉತ್ತರ ಪ್ರದೇಶದ ಲಲಿತಪುರದಲ್ಲಿ ನಡೆದಿದೆ.
ಸಂತ್ರಸ್ತ ಬಾಲಕಿ ಮಂಗಳವಾರ (ಅಕ್ಟೋಬರ್ 12 ರಂದು) ದೂರು ನೀಡಿದ್ದು, ದೂರಿನಲ್ಲಿ ಕಾಮುಕರ ಕ್ರೌರ್ಯವನ್ನು ತೆರೆದಿಟ್ಟಿದ್ದಾಳೆ. "ಪಾಪಿ ತಂದೆಯು ನಾನು 6ನೇ ತರಗತಿಯಲ್ಲಿದ್ದಾಗಲೇ ಪೋರ್ನ್ ವಿಡಿಯೋಗಳನ್ನು ತೋರಿಸುತ್ತಿದ್ದ. ಆನಂತರ ಮಹೇಶಪುರದ ಮೈದಾನದಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದ. ಅದಾದ ಬಳಿಕ ಆಗಾಗ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಥವಾ ಮನೆಯಲ್ಲಿ ಯಾರು ಇಲ್ಲದಿದ್ದಾಗ ಅತ್ಯಾಚಾರ ಎಸಗಿದ್ದಾನೆ" ಎಂದು ಸಂತ್ರಸ್ತೆ ಕಾಮುಕ ತಂದೆಯ ಕ್ರೌರ್ಯ ವಿವರಿಸಿದ್ದಾಳೆ.
"ತಂದೆ ಅತ್ಯಾಚಾರ ಎಸಗುತ್ತಿದ್ದಾಗ ಸ್ಥಳಕ್ಕೆ ಬಂದಿದ್ದ ಕಾಮುಕರು ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಈ ವಿಚಾರದಲ್ಲಿ ನನಗೆ ಬೆಂಬಲ ನೀಡುವುದಾಗಿ ಎಸ್‌ಪಿ, ಬಿಎಸ್‌ಪಿ ಜಿಲ್ಲಾಧ್ಯಕ್ಷರು ಸೇರಿ ಒಟ್ಟು 28 ಜನ ಕಾಮುಕರು ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ" ಎಂದು ಬಾಲಕಿ ದೂರಿದ್ದಾಳೆ.
ಬಾಲಕಿಯ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 354 (ಮಹಿಳೆಯ ಮೇಲೆ ಹಲ್ಲೆ), 376 ಡಿ (ಸಾಮೂಹಿಕ ಅತ್ಯಾಚಾರ), 323 (ಸ್ವಯಂಪ್ರೇರಣೆಯಿಂದ ನೋವನ್ನು ಉಂಟುಮಾಡುವುದು), 328, 506 (ಕ್ರಿಮಿನಲ್ ಬೆದರಿಕೆ), 120 ಬಿ (ಪಕ್ಷದಿಂದ ಕ್ರಿಮಿನಲ್ ಪಿತೂರಿ), ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯ ಸೆಕ್ಷನ್ 5 ಮತ್ತು 6 ಅಡಿಯಲ್ಲಿ ಲಲಿತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
PublicNext
13/10/2021 03:50 pm