ಕೊಲ್ಲಂ(ಕೇರಳ): ವಿಕಲಚೇತನ ಪತ್ನಿಗೆ ಹಾವು ಕಚ್ಚಿಸಿ ಕೊಲೆ ಮಾಡಿದ್ದ ಪಾಪಿ ಗಂಡನಿಗೆ ಕೇರಳ ನ್ಯಾಯಾಲಯ ನಾಳೆ ಬುಧವಾರ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ. ವಿಕಲಚೇತನಳಾಗಿದ್ದ ಉತ್ರಾ ಎನ್ನುವವರಿಗೆ ಪತಿ ಸೂರಜ್ ಹಾವು ಕಚ್ಚಿಸಿ ಕೊಲೆ ಮಾಡಿದ್ದ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಕೊಲ್ಲಂ ನ್ಯಾಯಾಲಯ ಈ ತೀರ್ಪನ್ನು ಪ್ರಕಟಿಸಲಿದೆ.
ಕೇರಳದ ಉತ್ರಾ ಕೊಲೆ ಪ್ರಕರಣದತ್ತ ಇಡೀ ದೇಶವೇ ತಿರುಗಿ ನೋಡುವಂತಾಗಿತ್ತು. ವಿಷಕಾರಿ ನಾಗರಹಾವಿನಿಂದ 25 ವರ್ಷದ ಪತ್ನಿ ಉತ್ರಾ ಅವರನ್ನು ಕಚ್ಚಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಪತಿ ಸೂರಜ್ ಅಪರಾಧಿ ಎಂದು ಕೇರಳ ನ್ಯಾಯಾಲಯವು ಸೋಮವಾರ ತೀರ್ಪು ನೀಡಿದೆ. ವಿಕಲಚೇತನಳಾದ ಪತ್ನಿಯನ್ನು ಕೊಂದು ಆಕೆಯ ಬಳಿ ಇರುವ ಚಿನ್ನಾಭರಣ ತನ್ನದಾಗಿಸಿಕೊಂಡು ಮತ್ತೊಂದು ಮದುವೆಯಾಗಿ ನೆಮ್ಮದಿಯಾಗಿರಬೇಕೆಂದು ಸೂರಜ್ ಪ್ಲ್ಯಾನ್ ಮಾಡಿದ್ದ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 302, 307, 328, 201ರ ಅಡಿ ಸೂರಜ್‌ರನ್ನು ಅಪರಾಧಿ ಎಂದು ಕೊಲ್ಲಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಅ.12ರಂದು ತೀರ್ಪು ಪ್ರಕಟಿಸಿದೆ. ನಾಳೆ ಅಕ್ಟೋಬರ್ 13ರಂದು ತೀರ್ಪು ಪ್ರಕಟವಾಗಲಿದೆ.
PublicNext
12/10/2021 11:00 am