ದಾವಣಗೆರೆ: ರೈಲಿನಲ್ಲಿ ಮರೆತು ಹೋಗಿದ್ದ ಸುಮಾರು 7.31 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ರೈಲ್ವೇ ಭದ್ರತಾ ಪಡೆ ಸಿಬ್ಬಂದಿಗಳು ಬ್ಯಾಗ್‌ಅನ್ನು ವಾರಸುದಾರರಿಗೆ ವಾಪಸ್ ನೀಡಿ ಪ್ರಾಮಾಣಿಕತೆ ತೋರಿದ್ದಾರೆ.
ದಾವಣಗೆರೆ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಂಬಳೂರು ಗ್ರಾಮದ ನಿವಾಸಿ ಶ್ರೀನಿವಾಸ್ ರಾಜ್ ಎಂಬುವವರು ಮೈಸೂರು – ಸೊಲ್ಲಾಪುರ ಎಕ್ಸ್ ಪ್ರೆಸ್ ರೈಲಿನಿಂದ ಇಳಿಯುವಾಗ ಬ್ಯಾಗ್ ಮರೆತು ಬಂದಿದ್ದರು. ನಂತರ ರೈಲಿನಲ್ಲೇ ಬ್ಯಾಗ್ ಮರೆತಿದ್ದು ನೆನಪಾಗಿ ಕೂಡಲೇ ರೈಲ್ವೇ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಶೋಧ ಕಾರ್ಯಾಚರಣೆ ನಡೆಸಿದ ರೈಲು ಪೊಲೀಸ್ ಸಿಬ್ಬಂದಿ ಬ್ಯಾಗ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀನಿವಾಸ್ ರಾಜ್‌ಗೆ ಬ್ಯಾಗ್ ತಲುಪಿಸಿದ್ದಾರೆ.
PublicNext
11/10/2021 10:50 am