ಬೆಂಗಳೂರಿನ ಹೊಸಕೋಟೆ ನಗರದ ಮಾರ್ಕೆಟ್ ರಸ್ತೆಯಲ್ಲಿ ಇಂದು ಬೆಳಗ್ಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 16 ವರ್ಷದ ಬಾಲಕಿ ಮೇಲೆ ನಾಯಿಗಳ ಹಿಂಡು ಏಕಾಏಕಿ ಅಟ್ಯಾಕ್ ಮಾಡಿವೆ.
ಇನ್ನು ಬಾಲಕಿ ಮೇಲೆ 9ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿದ ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಬಾಲಕಿಯನ್ನಾ 9 ಕ್ಕೂ ಅಧಿಕ ನಾಯಿಗಳು ಎಳೆದಾಡಿವೆ. ಈ ವೇಳೆ ಗಾಬರಿಗೊಂಡ ಬಾಲಕಿ ಕೂಗಾಡಿದ್ದಾಳೆ ಆಗ ನೆರವಿಗೆ ಬಂದ ಸ್ಥಳೀಯರು ಬಾಲಕಿಯನ್ನು ನಾಯಿಗಳಿಂದ ಬಚ್ಚಾವ್ ಮಾಡಿದ್ದಾರೆ.
ಬಾಲಕಿಯ ಅವಸ್ಥೆಯನ್ನು ಕಂಡ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಿಂದ ಪ್ರಾಣಾಪಾಯದಿಂದ ಪಾರಾದ ಬಾಲಕಿಗೆ ಚಿಕಿತ್ಸೆ ನೀಡಲಾಗಿದೆ.
PublicNext
09/10/2021 02:17 pm