ಬೆಳವಾಗಿ : ಅನ್ಯ ಕೋಮಿನ ಯುವತಿಯನ್ನ ಪ್ರೀತಿಸಿದ್ದಕ್ಕಾಗಿ ಯುವನೋರ್ವನನ್ನು ಕೊಲೆ ಮಾಡಿ ರೈಲ್ವೆ ಟ್ರ್ಯಾಕ್ ಮೇಲೆ ಹಾಕಿದ ಘಟನೆ ಬೆಳಗಾವಿಯ ಖಾನಾಪುರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೌದು ಬೆಳಗಾವಿ ಜಿಲ್ಲೆ ಖಾನಾಪುರ ಮೂಲದ ಅರ್ಬಾಜ್ ಮುಲ್ಲಾ ಎಂಬಾತ ಎರಡು ವರ್ಷಗಳಿಂದ ಅನ್ಯ ಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ. ವೃತ್ತಿಯಲ್ಲಿ ಅರ್ಬಾಜ್ ವೆಹಿಕಲ್ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದ. ಇನ್ನು ಇವರ ಲವ್ ಕಹಾನಿ ಯುವತಿ ಕುಟುಂಬಕ್ಕೆ ಗೊತ್ತಾದ ಮೇಲೆ ಯುವತಿ ತಂದೆ ಅರ್ಬಾಜ್ ಕೊಲೆಗೆ ಸುಪಾರಿ ನೀಡಿದ್ದ.
ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆಯ ಖಾನಾಪುರ ತಾಲೂಕು ಘಟಕದ ಅಧ್ಯಕ್ಷನಾಗಿದ್ದ ಪುಡಲೀಕ ಅಲಿಯಾಸ್ ಮಹಾರಾಜನಿಗೆ ಯುವತಿ ತಂದೆ ತಾಯಿ ಸುಪಾರಿ ಕೊಟ್ಟಿದ್ದರು. ಇನ್ನು ಸೆಪ್ಟೆಂಬರ್ 26 ರಂದು ಅರ್ಬಾಜ್ ಮುಲ್ಲಾ ಹಾಗೂ ಆತನ ತಾಯಿಯನ್ನು ಕರೆಯಿಸಿ ಬೆದರಿಕೆ ಹಾಕಿ ಅವನ ಬಳಿ ಇದ್ದ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿ ಸಿಮ್ ಮುರಿದು ಹಾಕಿದ್ದರು. ಬಳಿಕ ಸೆಪ್ಟೆಂಬರ್ 28ರಂದು ಅರ್ಬಾಜ್ ಮುಲ್ಲಾಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಇನ್ನು ಬೆಳಗಾವಿಯಿಂದ ಖಾನಾಪುರಕ್ಕೆ ಬಂದು ಅರ್ಬಾಜ್ ಕಡೆಯಿಂದ ಹಣ ಪಡೆದ ಕಿರಾತಕರು ಅರ್ಬಾಜ್ ಮುಲ್ಲಾ ಹತ್ಯೆ ಮಾಡಿ ರೇಲ್ವೆ ಹಳಿ ಮೇಲೆ ಶವ ಬಿಸಾಡಿ ಪರಾರಿಯಾಗಿದ್ದಾರೆ.
ಇದನ್ನು ಬೆಳಗಾವಿ ರೇಲ್ವೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಬೆಳಗಾವಿ ಮರಣೋತ್ತರ ಪರೀಕ್ಷೆಗೆ ಶವ ರವಾನಿಸಿದ್ದರು. ಇನ್ನು ಮರಣೋತ್ತರ ಪರೀಕ್ಷೆ ವೇಳೆ ಅರ್ಬಾಜ್ ಮುಲ್ಲಾ ಕೊಲೆಯಾಗಿದ್ದು ದೃಢಪಟ್ಟ ಬಳಿಕ ಬೆಳಗಾವಿ ಜಿಲ್ಲೆ ಖಾನಾಪುರ ಪೊಲೀಸರಿಗೆ ರೇಲ್ವೆ ಪೊಲೀಸರು ಪ್ರಕರಣವನ್ನು ವರ್ಗಾಯಿಸಿದ್ದರು.
ಈ ಕುರಿತು ತನಿಖೆ ಆರಂಭಿಸಿದ ಡಿವೈಎಸ್ ಪಿ ನೇತೃತ್ವದ ವಿಶೇಷ ತಂಡ ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದರು. ಬೆಳಗಾವಿ ಎಸ್ ಪಿ ಲಕ್ಷ್ಮಣ್ ನಿಂಬರಗಿ ಮೊದಲು ಪುಂಡಲೀಕ ಅಲಿಯಾಸ್ ಮಹಾರಾಜ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.
PublicNext
08/10/2021 02:43 pm