ಹಿರಿಯೂರು : ರಾತ್ರಿಯಿಡೀ ಸುರಿಯುತ್ತಿರುವ ಮಳೆಯಲ್ಲಿ ಯಾರೋ ದುಷ್ಕರ್ಮಿಗಳು ಅಡಿಕೆ ಹಾಗೂ ಪಪ್ಪಾಯಿ ಸಸಿಗಳನ್ನು ಕಿತ್ತು ರಸ್ತೆಗೆ ಎಸೆದಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ತಾಲ್ಲೂಕಿನ ಕೋಡಿಹಳ್ಳಿ ಗೊಲ್ಲರಹಟ್ಟಿ ಗ್ರಾಮದ ರೈತ ಗರಡಪ್ಪ ಅವರು ತನ್ನ 10 ಎಕರೆ ಹೊಲದಲ್ಲಿ ಅಡಿಕೆ ಹಾಗೂ ಪಪ್ಪಾಯಿ ಸಸಿಗಳನ್ನಾ ನಾಟಿ ಮಾಡಿದ್ದರು. ಬುಧವಾರ ತಡರಾತ್ರಿ ಸುರಿದ ಮಳೆಯಲ್ಲೇ ದುಷ್ಕರ್ಮಿಗಳು ನಾಟಿ ಮಾಡಿದ ಸಸಿಗಳನ್ನು ಕಿತ್ತು ರಸ್ತೆಗೆ ಎಸೆದು ಹೋಗಿದ್ದಾರೆ.
ಇನ್ನೂ ಹೊಲದಲ್ಲಿ ದುಷ್ಕರ್ಮಿಗಳು ಓಡಾಡಿರುವ ಹೆಜ್ಜೆ ಗುರುತು ಕಂಡು ಬಂದಿವೆ. ಇದರ ಜೊತೆಗೆ ಒಂದು ಜೊತೆ ಚಪ್ಪಲಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಅಬ್ಬಿನಹೊಳೆ ಪೊಲೀಸರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಇಂತಹ ನೀಚ ಕೃತ್ಯ ಎಸಗಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
PublicNext
07/10/2021 05:49 pm