ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನೈತಿಕ ಸಂಬಂಧಕ್ಕೆ ಮಹಿಳೆ ನಿರಾಕರಣೆ, ಮಹಿಳೆ ಮೇಲೆ ಪೆಟ್ರೋಲ್ ಸುರಿದ ಪಾಪಿ..!

ವರದಿ: ಮೌನೇಶ ಬಿ.ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

ಯಾದಗಿರಿ: ಪ್ರಿಯ ವೀಕ್ಷಕರೇ...ಯಾದಗಿರಿ ಜಿಲ್ಲೆ ಈಗ ಉತ್ತರ ಪ್ರದೇಶದ ಮಾದರಿಯಂತೆ ಮೃಗೀಯ ಘಟನೆಗಳಿಗೆ ಹೆಸರಾಗ್ತಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಿದೆ.

ಯಸ್.. ಇಷ್ಟು ದಿನ ತಣ್ಣಗಿದ್ದ ಜಿಲ್ಲೆಯಲ್ಲಿ ಈಗ ಬರೀ ಅತ್ಯಾಚಾರದಂತಹ ಘಟನೆಗಳು ಸಾಲು ಸಾಲಾಗಿ ಹೊರಬೀಳ್ತಿವೆ. ಅಲ್ಲದೇ ಶಹಾಪುರದಲ್ಲಿ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣದ ಬಗ್ಗೆ ವಿಧಾನಸಭೆ ಕಲಾಪದಲ್ಲೂ ಭಾರೀ ಚರ್ಚೆಗೆ ಕಾರಣವಾಗಿತ್ತು.

ಈಗ.. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಚೌಡೇಶ್ವರಿಹಾಳದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದೆ. ಪಾಲಮ್ಮ (35) ಎಂಬುವವರಿಗೆ ಅದೇ ಗ್ರಾಮದ ಗಂಗಪ್ಪ ಎಂಬಾತ ಅನೈತಿಕ ಸಂಬಂಧಕ್ಕೆ ಬಲವಂತವಾಗಿ ಪ್ರೇರೇಪಿಸಿದ್ದು, ಇದಕ್ಕೆ ನಿರಾಕರಿಸಿದ ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಅಂತಾ ಮಹಿಳೆ ತನಗಾದ ಪರಿಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾಳೆ.

ಇನ್ನು ನಿನ್ನೆ ಮಧ್ಯರಾತ್ರಿ 2 ಗಂಟೆ ವೇಳೆಗೆ ಮನೆಗೆ ನುಗ್ಗಿ ಈ ಕೃತ್ಯ ಎಸಗಿದ ಪಾಪಿ ಗಂಗಪ್ಪ ಬೆಂಕಿ ಹಚ್ಚಿ ಮನೆ ಬಾಗಿಲು ಹಾಕಿ ಪರಾರಿಯಾಗಿದ್ದ. ಪತಿ ಮರೆಪ್ಪ ಮಾನಸಿಕ ಅಸ್ವಸ್ಥನಾಗಿದ್ದು, ಗಂಡ ಬಹಿರ್ದೆಸೆಗೆ ತೆರಳಿದ್ದಾಗ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಈ ಪ್ರಕರಣವನ್ನು ಸುರಪುರ ಪೊಲೀಸರು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನ ಅರೆಸ್ಟ್ ಮಾಡಿ ಕಂಬಿ ಹಿಂದೆ ತಳ್ಳಿದ್ದಾರೆ.

ಅಲ್ಲದೇ.. ಪಾಲಮ್ಮಳನ್ನ ಸೋಮವಾರ ಸುರಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ತೆರಳಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆ ಪಾಲಮ್ಮ ಮೃತಪಟ್ಟಿದ್ದಾಳೆ.

ಇನ್ನು ಇಂದು ಸುರಪುರ ನಗರದ ಗಾಂಧಿ ವೃತ್ತದಲ್ಲಿ ಮಹಿಳೆಯ ಶವವಿಟ್ಟು ಕುಟುಂಬಸ್ಥರು ಹಾಗೂ ವಿವಿಧ ಸಾಮೂಹಿಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಆರೋಪಿ ಗಂಗಪ್ಪಗೆ ಮರಣದಂಡನೆ ಶಿಕ್ಷೆ ನೀಡಬೇಕು. ಇನ್ನುಳಿದ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಅಂತಾ ಒತ್ತಾಯಿಸುತ್ತಿದ್ದಾರೆ.

ಒಟ್ಟಾರೆ..ಜಿಲ್ಲೆಯಲ್ಲಿ ಇಂಥ ಪೈಶಾಚಿಕ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Edited By : Nagesh Gaonkar
PublicNext

PublicNext

05/10/2021 05:59 pm

Cinque Terre

100.05 K

Cinque Terre

11