ರಂಗಾರೆಡ್ಡಿ: ಮಕ್ಕಳ ಮನಸ್ಥಿತಿ ವೀಕ್ ಆಗಿದಿಯೋ ಅಥವಾ ಪಾಲಕರು ಬುದ್ದಿ ಹೇಳುವ ದಾಟಿ ಬದಲಾಗಿದಿಯೊ ಗೊತ್ತಿಲ್ಲ. ಇತ್ತಿಚೆಗೆ ಹೆತ್ತವರು ಬುದ್ದಿ ಮಾತು ಹೇಳುತ್ತಿದ್ದಂತೆ ಮಕ್ಕಳು ಸಾವಿನ ದಾರಿ ಹಿಡಿಯುತ್ತಿರುವುದು ದುರಂತ. ಹೌದು ಮೊಬೈಲ್ ನಲ್ಲಿ ಗೇಮ್ ಆಡಬೇಡ ಎಂದು ತಂದೆ ಗದರಿದ್ದಕ್ಕೆ ಮನನೊಂದ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೀರ್ ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಲಾಪುರ್ ಮೂಲದ ವೇಲದುರ್ತಿ ಮನೋಹರಚಾರಿ ಮತ್ತು ಲಾವಣ್ಯ ದಂಪತಿಯ ಕೌಶಿಕಿ (17) ನೇಣು ಹಾಕಿಕೊಂಡಿದ್ದಾಳೆ. ಕೌಶಿಕಿ ದ್ವಿತೀಯ ಪಿಯು ವಿದ್ಯಾರ್ಥಿನಿ ಮೊಬೈಲ್ ಗೀಳಿಗೆ ಬಿದ್ದಿದ್ದಳು ಅಪ್ಪನ ಮೊಬೈಲ್ ತೆಗೆದುಕೊಂಡು ಯಾವಾಗಲೂ ಗೇಮ್ ಆಡುತ್ತಿದ್ದಳು. ಹೀಗೆ ಗೇಮ್ ಆಡುತ್ತಿರುವಾಗ ಭಾನುವಾರ ರಾತ್ರಿ ಕೌಶಿಕಿ ತಂದೆ ಆಕೆಯನ್ನು ಬೈದು ಮೊಬೈಲ್ ಕಿತ್ತುಕೊಂಡಿದ್ದರು.
ಅದೇ ದಿನ ರಾತ್ರಿ ಕೌಶಿಕಿ ಮಲಗುವುದಾಗಿ ಹೇಳಿ ಬೆಡ್ ರೂಮ್ ಗೆ ತೆರಳಿ ಲಾಕ್ ಹಾಕಿಕೊಂಡಿದ್ದಾಳೆ. ಅದೇ ಕೋಣೆಯಲ್ಲಿ ದುಪ್ಪಟ್ಟದಿಂದ ನೇಣು ಹಾಕಿಕೊಂಡಿದ್ದಾಳೆ. ಸದ್ಯ ಮೀರ್ ಪೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
PublicNext
05/10/2021 03:42 pm