ಎರ್ನಾಕುಲಂ/ಚೆನ್ನೈ: ಪ್ರತ್ಯೇಕ ಪ್ರಕರಣಗಳಲ್ಲಿ ವಿದೇಶಕ್ಕೆ ರಫ್ತಾಗುತ್ತಿದ್ದ ಮಾದಕ ಪದಾರ್ಥಗಳನ್ನು ಎನ್.ಸಿ.ಬಿ ಅಧಿಕಾರಿಗಳು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ. ಎರ್ನಾಕುಲಂ ಹಾಗೂ ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ನಡೆದ ಪ್ರಕರಣಗಳಲ್ಲಿ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಎರ್ನಾಕುಲಂನಿಂದ ಏರ್ ಕೊರಿಯರ್ ಮೂಲಕ ಬಹ್ರೇನ್‌ಗೆ ಸಾಗಿಸಲಾಗುತ್ತಿದ್ದ 3.5 ಕೆ.ಜಿ ಹ್ಯಾಶಿಶ್ ಆಯಿಲ್
ಅನ್ನು ಸೀಜ್ ಮಾಡಲಾಗಿದೆ. ಇದನ್ನು ಸಾಗಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಹಾಗೂ ಈತ ನೀಡಿದ ಮಾಹಿತಿ ಮೇರೆಗೆ ಕೊಚ್ಚಿ ಎನ್.ಸಿ.ಬಿಯಿಂದ ಕಾಸರಗೋಡಿನಲ್ಲಿದ್ದ ಮತ್ತೋರ್ವನನ್ನು ಬಂಧಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಚೆನ್ನೈ ಇಂಟರ್ನ್ಯಾಷನಲ್ ಏರ್ ಕಾರ್ಗೋ ಮೂಲಕ ಆಸ್ಟ್ರೇಲಿಯಾಗೆ ಕಳಿಸಲಾಗುತ್ತಿದ್ದ 16 ಕೆ.ಜಿ ಸ್ಯೂಡೋಪೆಡ್ರೈನ್ ಜಪ್ತಿ ಮಾಡಲಾಗಿದೆ. ಇದರಲ್ಲಿ ಭಾಗಿಯಾಗಿದ್ದ ಓರ್ವ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಈಗಾಗಲೇ ಆಸ್ಟ್ರೇಲಿಯಾಗೆ ಕಳುಹಿಸಲಾಗಿದ್ದ 4 ಕೆ.ಜಿ ಸ್ಯೂಡೋಪೆಡ್ರೈನ್ಅನ್ನು ಕೂಡ ವಶಕ್ಕೆ ಪಡೆಯಲಾಗಿದೆ.
PublicNext
04/10/2021 05:18 pm