ಚಿತ್ರದುರ್ಗ: ಸಹಾಯಕ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ನಾಯಕನಹಟ್ಟಿ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗುರುಮೂರ್ತಿ ಆತ್ಮಹತ್ಯೆ ಮಾಡಿಕೊಂಡವರು. ಗುರುಮೂರ್ತಿ ಅವರ ಆತ್ಮಹತ್ಯೆಗೆ ಕೌಟುಂಬಿಕ ಸಮಸ್ಯೆಯೇ ಕಾರಣ ಎನ್ನಲಾಗುತ್ತಿದೆ.
ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಗುರುಮೂರ್ತಿ ಅವರು ಶನಿವಾರ (ಅಕ್ಟೋಬರ್ 2)ರಂದು ಹಿಂದೂ ಮಹಾಗಣಪತಿ ವಿಸರ್ಜನೆಯ ಬಂದೋಬಸ್ತ್ಗೆ ತಾವಾಗಿಯೇ ಕೇಳಿ ನಿಯೋಜನೆ ಮಾಡಿಸಿಕೊಂಡಿದ್ದರು. ಆದರೆ ಬಳಿಕ ಬಂದೋಬಸ್ತ್ಗೂ ತೆರಳದ ಅವರು ದಂಡಿನಕುರುಬರಹಟ್ಟಿ ಗ್ರಾಮದ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.
PublicNext
04/10/2021 02:10 pm