ಚಿಕ್ಕಬಳ್ಳಾಪುರ: ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮಡುಗು ಜಲಾಶಯದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ಕಂದವಾರ ಬಾಗಿಲು ನಿವಾಸಿ ಭರತ್ ಗುರುವಾರ ಮನೆಯಿಂದ ಹೊರ ಹೋಗಿದ್ದ ಎನ್ನಲಾಗಿದೆ. ಮೃತ ಭರತ್ ಫೈನಾನ್ಸ್ ಹಾಗೂ ಚೀಟಿ ವ್ಯವಹಾರ ನಡೆಸುತ್ತಿದ್ದ. ಜಲಾಶಯದ ಆವರಣದಲ್ಲಿ ಬೈಕ್ ಪತ್ತೆಯಾದ ಕಾರಣ ಆತ್ಮಹತ್ಯೆ ಶಂಕೆ ವ್ಯಕ್ತವಾಗಿತ್ತು. ನಿನ್ನೆ ಶನಿವಾರ ಭರತ್‌ಗಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಆದ್ರೆ ಇಂದು ರವಿವಾರ ಬೆಳಿಗ್ಗೆ ಶವ ಮೇಲೆ ತೇಲಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
03/10/2021 03:11 pm