ಮನೆ ಲೀಸ್ ಬಿಡುಗಡೆ ವಿಚಾರದಲ್ಲಿ ಮನೆ ಮಾಲೀಕ, ಬಾಡಿಗೆದಾರರ ನಡುವೆ ಗಲಾಟೆ ತಾರಕಕ್ಕೆ ಏರಿ ತಳ್ಳಾಟ, ನೂಕಾಟದ ವೇಳೆ ಮನೆ ಮಾಲೀಕ ಶಂಕರಾಚಾರಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ಎನ್.ಆರ್. ಬಡಾವಣೆಯಲ್ಲಿ ನಡೆದಿದೆ.
ಸರ್ಕಾರಿ ಸೇವೆಯಿಂದ ಇತ್ತೀಚೆಗಷ್ಟೇ ನಿವೃತ್ತಿಯಾಗಿದ್ದ ಶಂಕರಾಚಾರಿಯವರು ಮನೆ ಲೀಸ್ ದಾರ ನಾರಾಯಣಸ್ವಾಮಿ, ಮತ್ತವರ ಪತ್ನಿ ಲಕ್ಷ್ಮೀ, ಮಕ್ಕಳಿಂದ ಕೊಲೆಯ ಆರೋಪ ಎದುರಿಸುತ್ತಿದ್ದರು.ಈ ಹಿನ್ನೆಲೆಯಲ್ಲಿ ಚಿಂತಾಮಣಿ ನಗರ ಪೊಲೀಸ್ ಠಾಣೆಗೆ ಶಂಕರಾಚಾರಿ ಪತ್ನಿ ನಿರ್ಮಲ ೪ ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ನಡುವೆ ಬಾಡಿಗೆದಾರರು ಮಾಲೀಕರೊಂದಿಗೆ ಕೈ- ಕೈ ಮಿಲಾಯಿಸಿ ಮಾಲೀಕನ ಸಾವಿಗೆ ಕಾರಣರಾಗಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ.ಇನ್ನು ಘಟನೆಗೆ ಸಂಬಂಧಿಸಿದಂತೆ ನಾರಾಯಣಸ್ವಾಮಿ, ಲಕ್ಷ್ಮೀಯನ್ನು ಪೊಲೀಸರು ಬಂಧಿಸಿದ್ದು ಇನ್ನಿಬ್ಬರು ಪರಾರಿಯಾಗಿದ್ದಾರೆ.
PublicNext
02/10/2021 03:05 pm