ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮುತ್ತಯಯ್ಯನ ಹಟ್ಟಿ ಗ್ರಾಮದ ಬಂಜಾರ ಸಮುದಾಯ ಹಾಗೂ ನಾಯಕ ಸಮುದಾಯದ ಮಧ್ಯೆ ಹಬ್ಬದಲ್ಲಿ ಕುರಿ ಕಡಿಯುವ ವಿಚಾರಕ್ಕೆ ಗಲಾಟೆ ನಡೆದಿದೆ. ಎರಡು ಸಮುದಾಯಗಳ ನಡುವೆ ಮಾರಾಮಾರಿ ನಡೆದಿದೆ. ಗ್ರಾಮದಲ್ಲಿ ಸೇವಾಲಾಲ್ ಹಾಗೂ ಮಾರಮ್ಮ ದೇವಾಸ್ಥಾನಗಳು ಎರಡು ದೇವಸ್ಥಾನಗಳು ಅಕ್ಕಪಕ್ಕ ಇದ್ದು, ಮಾರಮ್ಮ ಹಬ್ಬದ ನಿಮ್ಮಿತ್ತ ಕುರಿ ಕಡಿಯುವಾಗ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದು ಗಲಾಟೆ ವಿಕೋಪಕ್ಕೆ ತಿರುಗಿ ಯುವಕರ ಗುಂಪುಗಳ ಮಧ್ಯೆ ಹಲವು ಜನರಿಗೆ ಘಾಯಗಳಾಗಿ ಪ್ರಕರಣ ಪೊಲಿಸ್ ಠಾಣೆಯ ಮೆಟ್ಟಿಲೆರಿದೆ ಎಂದು ವರದಿಯಾಗಿದೆ.
ಬುಧವಾರ ಪೋಲಿಸ್ ಠಾಣೆಗೆ ಪ್ರಕರಣ ದಾಖಲಿಸಲು ಬಂಜಾರ ಸಮುದಾಯ ಹಾಗೂ ಚಳ್ಳಕೆರೆ ನಗರದ ಚಿತ್ರಯ್ಯನಹಟ್ಟಿ ದಾರಿಮಧ್ಯೆ ಆಗಮಿಸುವ ಸಂಧರ್ಭದಲ್ಲಿ ಎರಡು ಗುಂಪುಗಳು ಮತ್ತೆ ಗಲಾಟೆಗೆ ಸಜ್ಜಾಗಿದ್ದವು ಎಂಬ ವಿಷಯ ತಿಳಿದ ಡಿವೈಎಸ್ಪಿ ಕೆ.ವಿ.ಶ್ರೀಧರ್, ಪಿಎಸ್ಐ ಮಹೇಶ್ ಗೌಡ ಸಿಬ್ಬಂದಿ ದಾರಿ ಮಧ್ಯೆ ಬಂಜಾರ ಸಮುದಾಯದವರನ್ನು ರಕ್ಷಣೆಯಿಂದ ಪೊಲೀಸ್ ಠಾಣೆಗೆ ಕರೆತಂದು ವಿಚಾಣೆ ನಡೆಸಿದ್ದಾರೆ.
PublicNext
01/10/2021 03:37 pm