ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ; ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖುಷಿತಂದಿದೆ ;ನಿವೃತ್ತ ಎಸ್ಪಿ‌ ಬಿ.ಎನ್ ನ್ಯಾಮಗೌಡ

ಬೆಳಗಾವಿ: ಉಮೇಶ ರೆಡ್ಡಿ ಒಬ್ಬ ವಿಕೃತ ಕಾಮಿಯಾಗಿದ್ದ ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ಕಾನೂನು ಹೋರಾಟವೂ ಮಾಡಿದ್ದ ಈಗ ನ್ಯಾಯಾಲಯ ಆತನಿಗೆ ಗಲ್ಲು ಶಿಕ್ಷೆ ಖಾಯಂಗೊಳ್ಳಿಸಿದ್ದು ಖುಷಿ‌ ತಂದಿದೆ ಎಂದು ಉಮೇಶ ರೆಡ್ಡಿ ಬಂಧಿಸಿದ್ದ ತನಿಖಾಧಿಕಾರಿ ವಿಶ್ರಾಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನ್ಯಾಮಗೌಡ್ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

1998 ಫೆಬ್ರವರಿ 28 ರಂದು ಜಯಶ್ರೀ ಮೇಲೆ ರೇಪ್ ಮಾಡಿ ದರೋಡೆ ಮಾಡಿ ಪರಾರಿಯಾಗಿದ್ದ ಈತ .ಆಕೆಯನ್ನು ನಗ್ನವಾಗಿಸಿ‌ ಕೊಲೆ ಮಾಡಿ ಆಕೆಯ ಪುತ್ರನಿಗೆ ನಿಮ್ಮ ತಾಯಿ ಮೈಮೇಲೆ ದೆವ್ವ ಬಂದಿದೆ ಡಾಕ್ಟರ್ ಕರೆದುಕೊಂಡು ಬರುವುದಾಗಿ ಹೇಳಿ ಪರಾರಿಯಾಗಿದ್ದ ಹಾಗೂ ಈ ಕಾಮುಕ ಪಿಣ್ಯಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮತ್ತೊಂದು ಅತ್ಯಾಚಾರ ಮಾಡಲು‌ ಸಂಚು ಹಾಕಿದಾಗ ಪೊಲೀಸ್ ಕೈಗೆ ಸಿಕ್ಕಿ ಬಿದ್ದದ್ದ.

ಜಯಶ್ರೀ ಎಂಬ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ‌ಮಾಡಿದ ಬಳಿಕ ಮಾರನೆ ದಿನ ಬೆಂಗಳೂರಿನ ಮಾರ್ಡನ್ ಕಾಲೋನಿಯಲ್ಲಿ ಕೃತ್ಯ ಎಸುಗುವಾಗ ಪಿಣ್ಯಾ ಪೊಲೀಸರಿಂದ ಈತನ ಬಂಧನ ಮಾಡಲಾಗಿತ್ತು. ಬಂಧನದ ವೇಳೆ ಉಮೇಶ್ ರೆಡ್ಡಿ ಇದ್ದ ಬಾಡಿಗೆ ಮನೆಯಲ್ಲಿಟ್ಟಿದ್ದ4 ಕೆಜಿ ಬಂಗಾರ, 2 ಲಕ್ಷ ನಗದು ಜಪ್ತು ಮಾಡಲಾಗಿತ್ತು. ಈತನ ಮೇಲೆ 22 ಪ್ರಕರಣಗಳಿವೆ. ಮಾನ, ಮರ್ಯಾದೆಗೆ ಹೆದರಿ ಬಹಳಷ್ಟು ಜನರು ಬರೀ ದರೋಡೆ ಅಂತಾ ಕೇಸ್ ನೀಡಿದ್ದಾರೆ ಎಂದರು.

ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆ ಅವಧಿಯೊಳಗೆ ಉಮೇಶ ರೆಡ್ಡಿ ಕೃತ್ಯ ಎಸಗುತ್ತಿದ್ದ. ಕುಡಿಯಲು ನೀರು ಕೊಡಿ, ಇಲ್ಲಾ ಬಾಡಿಗೆ ಮನೆ ಬೇಕಿದೆ ಎಂದು ಒಂಟಿ ಮಹಿಳೆಯರು ಇರುವ ಮನೆಯನ್ನು‌ ಗುರಿಯಾಗಿಸಿಕೊಂಡು ತನ್ನ ನೀಚ ಕೃತ್ಯ ಎಸಗುತ್ತಿದ್ದ ಎಂಬುದು ತನಿಖೆಯ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ಹೇಳಿದರು.

ಮನೆ ನುಗ್ಗಿದ ಬಳಿಕ ಮಹಿಳೆಯನ್ನ ಬೆತ್ತಲೆ ಮಾಡಿ ಕೊಠಡಿಯಲ್ಲಿ ಹಾಕಿ ಪರಾರಿ ಆಗುತ್ತಿದ್ದ ಈ ಕಿರಾತಕ. ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ಉಮೇಶ್ ರೆಡ್ಡಿ ಕಾನೂನು ಹೋರಾಟ ಮಾಡಿದ್ದ, ಈಗ ಗಲ್ಲು ಶಿಕ್ಷೆ ಖಾಯಂ ಆಗಿರುವುದು ಖುಷಿಯಾಗಿದೆ ಎಂದು ನಿವೃತ್ತ ಎಸ್ಪಿ ಬಿ.ಎನ್.ನ್ಯಾಮಗೌಡ ಹೇಳಿದರು.

Edited By : Nagesh Gaonkar
PublicNext

PublicNext

30/09/2021 03:10 pm

Cinque Terre

66.54 K

Cinque Terre

3