ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಖಿನ್ನತೆಯಿಂದ ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಯತ್ನ ;ತಾಯಿ ಬಚಾವ್ ಮಗುವಿಗಾಗಿ ಮುಂದುವರಿದ ಶೋಧ ಕಾರ್ಯ

ಗದಗ: ಪತಿ ಸಂಗಮೇಶ್ ಸಾವಿನಿಂದಾಗಿ ಖಿನ್ನತೆಗೊಳಗಾಗಿದ್ದ ಹೆಂಡತಿ ತನ್ನ ಮಕ್ಕಳೊಂದಿಗೆ ಮಲಪ್ರಭ ನದಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಅದೃಷ್ಟವಶಾತ್ ತಾಯಿ ನದಿ ಮಧ್ಯದ ಪೊದೆಯಲ್ಲಿ ಸಿಕ್ಕಿ ಬಚಾವ್ ಆಗಿದ್ದಾಳೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತನ್ನ ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಈಕೆಯ ಕೈಯಿಂದ ಇಬ್ಬರು ಮಕ್ಕಳು ಬಿಡಿಸಿಕೊಂಡು ಬಂದಿದ್ದು ಇನ್ನೊಂದು ಮಗು ಶ್ರೇಷ್ಠ ನಾಪತ್ತೆಯಾಗಿದೆ.

ನಿನ್ನೆ ಇಡೀ ದಿನ ಶ್ರೇಷ್ಠ ನಿಗಾಗಿ ಹುಡುಕಾಟ ನಡೆಸಿದ್ದು ಸಂಜೆ ಬೆಳಕಿನ ಅಭಾವದ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.

ಇಂದು ಮತ್ತೆ ಮಗುವಿಗಾಗಿ ಕಾರ್ಯಾಚರಣೆ‌ ಮುಂದುವರಿದಿದೆ.

Edited By : Manjunath H D
PublicNext

PublicNext

30/09/2021 01:23 pm

Cinque Terre

79.89 K

Cinque Terre

0

ಸಂಬಂಧಿತ ಸುದ್ದಿ