ಹಿರೇಹಳ್ಳಿ ಟೋಲ್ ಗೇಟ್ ಸಿಬ್ಬಂದಿಗಳು ಗೂಂಡಾಗಿರಿ ನಡೆಸಿ, ಇಬ್ಬರು ವಾಹನ ಸವಾರರ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ.
ಟೋಲ್ ಗೇಟ್ ನಲ್ಲಿ ವಾಹನ ಬಿಡುಗಡೆ ವಿಳಂಬ ಹಿನ್ನೆಲೆಯಲ್ಲಿ ವಾಹನ ಸವಾರರು ಮತ್ತು ಸಿಬ್ಬಂದಿ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಇನ್ನೂ ಹಲ್ಲೆ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದ್ದು ಚಳ್ಳಕೆರೆಯ ಶಿವರಾಜು ಹಾಗೂ ರಾಜೇಶ್ ಗೆ ಗಾಯಗಳಾಗಿವೆ.
ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
30/09/2021 09:34 am