ಬೆಳಗಾವಿ: ಮಾಜಿ ಸೈನಿಕನೋರ್ವ ಕೋರ್ಟ್ ಆವರಣದಲ್ಲೇ ಪತ್ನಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ನಡೆಡಿದೆ.
ಮಾಜಿ ಸೈನಿಕ ಶಿವಪ್ಪ ನಿಂಗಪ್ಪ ಅಡಕಿ (35), ತನ್ನ ಪತ್ನಿ ಜಯಮಾಲಾ (33) ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಜಯಮಾಲಾ ಅವರ ತಲೆ, ಕೈ, ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.
ಹೌದು. ಬ್ಯಾಂಕ್‌ನಲ್ಲಿರುವ ಹಣದ ವಿಚಾರವಾಗಿ ಶಿವಪ್ಪ- ಜಯಮಾಲಾ ದಂಪತಿ ನಡುವೆ ಜಗಳವಾಗುತ್ತಿತ್ತು. ಈ ಕಲಹದ ವ್ಯಾಜ್ಯವು ನ್ಯಾಯಾಲಯದಲ್ಲಿತ್ತು. ಪರಿಣಾಮ ಪತಿಯಿಂದ ದೂರವಾದ ಜಯಮಾಲಾ ಹುಬ್ಬಳ್ಳಿಯ ತನ್ನ ತವರು ಮನೆಯಲ್ಲಿದ್ದರು.ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ದಂಪತಿ ಕೋರ್ಟ್‌ಗೆ ಬಂದಿದ್ದರು. ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿದ್ದು, ಮಾತಿಗೆ ಮಾತು ಬೆಳೆದಿದೆ. ಪರಿಣಾಮ ಕೋಪಗೊಂಡ ಶಿವಪ್ಪ ಪತ್ನಿ ಜಯಮಾಲಾಳ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬೈಲಹೊಂಗಲ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
29/09/2021 04:14 pm