ಬೆಂಗಳೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ನೆನಪು ಮಾಸುವ ಮುನ್ನ ಅಂತದ್ದೇ ಘಟನೆ ನಡೆದಿದೆ. ಆದ್ರೆ ಇಲ್ಲಿ ಹೀನ ಕೃತ್ಯ ನಡೆದಿಲ್ಲ ಎಂಬುದೇ ಸಮಾಧಾನಕರ ವಿಷಯ.
ಯುವತಿಯೊಬ್ಬಳು ತನ್ನ ಸಂಬಂಧಿ ಹುಡುಗನೊಂದಿಗೆ ಖಾಸಗಿ ಲೇಔಟ್ ಗೆ ಹೋಗಿದ್ದಾಳೆ. ಬೆಳಿಗ್ಗೆ 11 ಕ್ಕೆ ಅಲ್ಲಿಗೆ ಹೋಗಿದ್ದ ಜೋಡಿ ಕಾರಿನಲ್ಲಿ ಕುಳಿತು ಸ್ನ್ಯಾಕ್ಸ್ ತಿನ್ನುತ್ತಿದ್ದರು. ಇದೇ ವೇಳೆ ಕಾಮುಕರ ಗ್ಯಾಂಗ್ ಅಲ್ಲಿ ಎಂಟ್ರಿ ಹೊಡೆದಿದೆ.
ಕೂಡಲೇ ಈ ಕೀಚಕರು ಕಾರಿನಲ್ಲಿದ್ದ ಜೋಡಿಯನ್ನು ಬೆದರಿಸಿದ್ದಾರೆ. ಯುವತಿಯ ಕೈ ಹಿಡಿದು ಎಳೆದಾಡಿದ್ದಾರೆ. ಇದಕ್ಕೂ ಮುನ್ನ ಅವರ ಖಾಸಗಿ ವಿಡಿಯೋ ಮಾಡಿಕೊಂಡಿದ್ದ ಕೀಚಕರು, ನಿಮ್ಮ ವಿಡಿಯೋ ನನ್ನ ಬಳಿ ಇದೆ. 5 ಲಕ್ಷ ಹಣ ಕೊಡಿ ಇಲ್ಲವಾದಲ್ಲಿ ನಿಮ್ಮ ವಿಡಿಯೋ ವೈರಲ್ ಮಾಡುತ್ತೇವೆ ಎಂದು ಬೆದರಿಸಿದ್ದಾರೆ. ಇದೇ ವೇಳೆ ದೂರದಲ್ಲಿ ಜನ ಬರುತ್ತಿರುವುದನ್ನು ಗಮನಿಸಿದ ಗುಂಪು ಅಲ್ಲಿಂದ ಕಾಲ್ಕಿತ್ತಿದೆ.
ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ನಂತರ ಪೊಲೀಸರು ಅನುಮಾಸ್ಪದ ವ್ಯಕ್ತಿಗಳನ್ನು ಯುವತಿಗೆ ತೋರಿಸಿದಾಗ ಯುವತಿ ಆರೋಪಿಗಳನ್ನು ಗುರುತು ಹಿಡಿದಿದ್ದಾಳೆ. ಸಯ್ಯದ್ ಆಸೀಫ್ ಪಾಷಾ, ನವಾಜ್ ಪಾಷಾ, ಲಿಯಾಖತ್ ಪಾಷಾ, ಸಲ್ಮಾನ್ ಖಾನ್, ಹಾಗೂ ರೂಜಿದ್ ಎಂಬಾತರನ್ನು ಬಂಧಿಸಿರುವ ಪೊಲೀಸರು ಕೇಸ್ ದಾಖಲಿಸಿ ವಿಚಾರಣೆ ನಡೆಸಿದ್ದಾರೆ.
PublicNext
29/09/2021 03:27 pm