ಯಾದಗಿರಿ: ಜಿಲ್ಲೆಯ ನೀಲಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದ ಜನರನ್ನು ಒತ್ತಾಯವಾಗಿ ಮತಾಂತರಕ್ಕೆ ಯತ್ನಿಸಿದ ಆರೋಪದಡಿ ನಾಲ್ವರನ್ನು ಸೈದಾಪುರ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಇದೆ.
ಒಟ್ಟು ನಾಲ್ವರನ್ನು ಬಂಧಿಸಲಾಗಿದೆ. ಇದರಲ್ಲಿ ಇಬ್ಬರು ಮಹಿಳೆಯರಿದ್ದಾರೆ. ಬಂಧಿತರನ್ನು ‘ಕ್ರೈಸ್ತ ಪಾದ್ರಿ ಜೇಮ್ಸ್ ಡೇವಿಡ್ ದಾಸ್ ಮಾಧ್ವಾರ, ಶಾಂತರಾಜ ಜೇಮ್ಸ್ ದಾಸ್, ನೀಲಮ್ಮ ಜೇಮ್ಸ್‌ದಾಸ್, ಮಾಳಮ್ಮ ರಾಘವೇಂದ್ರ ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಸಿಪಿಐ ವಿಜಯ ಕುಮಾರ ತಿಳಿಸಿದ್ದಾರೆ.
ಬಂಧಿತರು ಸಾಮೂಹಿಕವಾಗಿ ಮತಾಂತರ ಕಾರ್ಯದಲ್ಲಿ ತೊಡಗಿದ್ದರು. ಹಾಗೂ ಒತ್ತಾಯವಾಗಿ ಮತಾಂತರ ಆಗುವಂತೆ ಪುಸಲಾಯಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಗ್ರಾಮದ ಕೆಲ ಯುವಕರು ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕಾಗಿ ಪಾದ್ರಿ ಜೇಮ್ಸ್ ಹಾಗೂ ಯುವಕರ ನಡುವೆ ಮಾತಿನ ಚಕಮಕಿ ಆಗುತ್ತಿತ್ತು.
PublicNext
29/09/2021 08:21 am