ನೆಲಮಂಗಲ(ಬೆಂಗಳೂರು): ಗಂಡ ಸತ್ತ ಮೇಲೆ ಆಕೆ ಗಂಡನ ಗೆಳೆಯನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ಆತ ಈಕೆಗಾಗಿ ಬೇರೊಂದು ಮನೆ ಮಾಡಿ ಕೊಟ್ಟಿದ್ದ. ಇಲ್ಲಿ ಶುರುವಾದ ಇನ್ನೊಂದು ಲವ್ ಕಹಾನಿ ಲವರ್ ಬಾಯ್ ಕೊಲೆಗೆ ಕಾರಣವಾಗಿದೆ.
ಯೆಸ್..ಒಟ್ಟಾರೆ ಘಟನೆಗೆ ಕಾರಣವಾಗಿದ್ದು ಅಕ್ರಮ ಸಂಬಂಧ. ನೆಲಮಂಗಲ ಸಮೀಪ ಮಾದಾವರದಲ್ಲಿ ಈ ಕೊಲೆ ನಡೆದಿದೆ. ಕೇವಲ 26 ವರ್ಷ ವಯಸ್ಸಿನ ಕಿರಣ್ ಎಂಬಾತನೇ ಕೊಲೆಯಾದ ಯುವಕ. ತನ್ನ ಗೆಳೆಯ ಇತ್ತೀಚೆಗೆ ಮೃತಪಟ್ಟಿದ್ದ. ಇದಾಗಿ ಸ್ವಲ್ಪ ದಿನಗಳ ಕಿರಣ್ ಹಾಗೂ ಆತನ ಮೃತ ಗೆಳೆಯನ ಪತ್ನಿ ಶ್ವೇತಾ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು. ಆಕೆಗೆ ಬೇರೆ ಮನೆ ಮಾಡಿ ಇಬ್ಬರು ಮಕ್ಕಳೊಂದಿಗೆ ಅಲ್ಲೇ ಇರಲು ಬಿಟ್ಟಿದ್ದ ಕಿರಣ್ ಆಗಾಗ ಅಲ್ಲಿಗೆ ಹೋಗಿ ಬರ್ತಿದ್ದ. ಈ ಎಲ್ಲದರ ನಡುವೆ ಶ್ವೇತಾಳ ಹಿರಿಯ ಮಗಳ ಮೇಲೆ ಕಿರಣ್ ಕಣ್ಣು ಹಾಕಿದ್ದ ಈ ವಿಷಯ ಮನೆಯಲ್ಲಿ ಗೊತ್ತಾಗಿ ಮನೆಯವರು ಕಿರಣ್ ಗೆ ಬೇರೆಡೆ ಮದುವೆ ನಿಶ್ಚಯಿಸಿದ್ದರು.
ತನ್ನೊಂದಿಗೆ ಸಂಬಂಧ ಇಟ್ಟುಕೊಂಡು ಮಗಳ ಮೇಲೂ ಕಣ್ಣು ಹಾಕಿದ್ದಲ್ಲದೇ ಬೇರೆ ಮದುವೆ ಸೆಟ್ ಮಾಡಿಕೊಂಡ ಕಿರಣ್ ಮೇಲೆ ಶ್ವೇತಾ ಕುಪಿತಳಾಗಿದ್ದಳು. ಇದಾಗಿ ಕೆಲ ದಿನಗಳ ಮೇಲೆ ಡೇವಿಡ್ ಎಂಬ ಮತ್ತೊಬ್ಬನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಶ್ವೇತಾ ನಮ್ಮ ಸಂಬಂಧ ಸುಸೂತ್ರವಾಗಿ ನಡೆಯುವಂತಾಗಲು ಕಿರಣ್ ಕತೆ ಮುಗಿಸಬೇಕು ಎಂದು ಪುಸಲಾಯಿಸಿದ್ದಾಳೆ. ಅದಕ್ಕಾಗಿ 1 ಲಕ್ಷ ಸುಪಾರಿ ಮಾತಾಡಿ 10 ಸಾವಿರ ಅಡ್ವಾನ್ಸ್ ಕೊಟ್ಟಿದ್ದಳಂತೆ. ಇದಕ್ಕೆ ಒಪ್ಪಿದ ಡೇವಿಡ್ ಸೆಪ್ಟೆಂಬರ್ 5ರಂದು ಕಿರಣ್ ಮನೆಗೆ ತೆರಳುತ್ತಿದ್ದ ವೇಳೆ ಡೇವಿಡ್ ಹಾಗೂ ಆತನ ಸಹಚರರು ಅಟ್ಯಾಕ್ ಮಾಡಿ ಚಾಕುವಿನಿಂದ ಇರಿದಿದ್ದಾರೆ. ಚಿಕಿತ್ಸೆ ಫಲಿಸದೇ ಸೆ.7ಕ್ಕೆ ಕಿರಣ್ ಮೃತಪಟ್ಟಿದ್ದ ಈ ಬಗ್ಗೆ ತನಿಖೆ ಕೈಗೊಂಡ ನೆಲಮಂಗಲ ಪೊಲೀಸರು ಶ್ವೇತಾ ಹಾಗೂ ಪ್ರಿಯಕರ ಡೇವಿಡ್ ಸೇರಿ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ.
PublicNext
25/09/2021 02:22 pm