ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾರಾಷ್ಟ್ರ: ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್: 22 ಆರೋಪಿಗಳು ಅರೆಸ್ಟ್

ಪುಣೆ: 15 ವರ್ಷ ವಯಸ್ಸಿನ ಬಾಲೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 22 ಜನ ಕಾಮುಕರನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ. ಥಾಣೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಕಳೆದ 8 ತಿಂಗಳಲ್ಲಿ 15 ವರ್ಷದ ಬಾಲಕಿಯನ್ನು ಇಬ್ಬರು ಅಪ್ರಾಪ್ತರು ಸೇರಿದಂತೆ 24 ಜನರು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದರೊಂದಿಗೆ ಇಬ್ಬರು ಅಪ್ರಾಪ್ತ ಆರೋಪಿಗಳನ್ನೂ ವಶಕ್ಕೆ ಪಡೆಯಲಾಗಿದೆ.

ಅತ್ಯಾಚಾರ ಎಸಗಿದ ಕಾಮುಕರು ಬಾಲೆಯನ್ನು ಬ್ಲ್ಯಾಕ್ ಮೇಲ್ ಮಾಡಲು ಅದರ ವಿಡಿಯೋ ಮಾಡಿಟ್ಟುಕೊಂಡಿದ್ದರು ಎನ್ನಲಾಗಿದೆ. “ಎಲ್ಲಾ ಆರೋಪಿಗಳನ್ನು ರಿಮಾಂಡ್ ಪಡೆಯಲು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ” ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಕಲ್ಯಾಣ್ ವಿಭಾಗ) ದತ್ತಾತ್ರಯ್ ಕರಾಳೆ ಹೇಳಿದರು. ಪೊಲೀಸರ ಪ್ರಕಾರ, 9 ನೇ ತರಗತಿ ವಿದ್ಯಾರ್ಥಿನಿಯಾಗಿರುವ ಬಾಲಕಿಯನ್ನು ಅಪ್ರಾಪ್ತ ವಯಸ್ಸಿನ ಆಕೆಯ ಸ್ನೇಹಿತ ಜನವರಿಯಲ್ಲಿ ಅತ್ಯಾಚಾರ ಮಾಡಿದ್ದಾನೆ.

ಸಂತ್ರಸ್ತೆ ಎಫ್‌ಐಆರ್‌ನಲ್ಲಿ ಒಟ್ಟು 33 ಜನರನ್ನು ಹೆಸರಿಸಿದ್ದಾರೆ ಮತ್ತು ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಎಲ್ಲಾ ಆರೋಪಿಗಳು 16 ರಿಂದ 23 ವರ್ಷದೊಳಗಿನವರು.

Edited By : Nagaraj Tulugeri
PublicNext

PublicNext

23/09/2021 08:20 pm

Cinque Terre

115.81 K

Cinque Terre

7