ಬೆಂಗಳೂರು : ನಿವೃತ್ತ ಹವಾಲ್ದಾರ್ ಪುತ್ರನ ಆತ್ಮಹತ್ಯೆ ಕುರಿತು ಪೊಲೀಸರು ಆಳವಾಗಿ ತನಿಖೆ ನಡೆಸುತ್ತಿದ್ದು, ಈ ವೇಳೆ ಭಯಾನಕ ವಿಚಾರಗಳು ಹೊರ ಬರುತ್ತಿವೆ. ವಿದ್ಯಾರ್ಥಿ ರಾಹುಲ್ ಭಂಡಾರಿ ವರ್ತನೆ ಬಗ್ಗೆ ಕೇಳಿ ಸ್ವತಃ ಪೊಲೀಸರೇ ಶಾಕ್ ಆಗಿದ್ದಾರೆ.
ಎಸ್ಎಸ್ಎಲ್ ಸಿಯಲ್ಲಿ ಶೇ.90 ಅಂಕ ಗಳಿಸಿದ್ದ ಇತ್ತಿಚೆಗೆ ರಾಹುಲ್ ವಿಚಿತ್ರವಾಗಿ ವರ್ತಿಸೋಕೆ ಶುರು ಮಾಡಿದ್ದ. ತನ್ನ ರೂಮಲ್ಲಿ ಕೂತು ಸೈಕೋ ರೀತಿ ವರ್ತಿಸುತ್ತಿದ್ದ. ಓದಲು, ಬರೆಯಲು, ಗೇಮ್ ಆಡಲು, ತಾನೇ ಟಾರ್ಗೆಟ್ ಫಿಕ್ಸ್ ಮಾಡಿಕೊಳ್ಳುತ್ತಿದ್ದ. ಟಾರ್ಗೆಟ್ ಸಕ್ಸಸ್ ಆದರೆ ಯೆಸ್ ಎಂದು ಸಿಂಬಲ್ ಹಾಕ್ತಿದ್ದ, ಟಾರ್ಗೆಟ್ ಫೇಲ್ ಆದರೆ ಇಂಟು ಮಾರ್ಕ್ ಹಾಕುತ್ತಿದ್ದ. ಅಲ್ಲದೆ ಸಕ್ಸಸ್ ಆದರೆ ಜೋರಾಗಿ ನಗೋದು, ಫೇಲ್ ಆದರೆ ಕೋಪದಲ್ಲಿ ವಸ್ತುಗಳನ್ನು ಹೊಡೆಯೋದು ಮಾಡುತ್ತಿನಂತೆ.
ರಾಹುಲ್ ವರ್ತನೆ ಕಂಡು ಪೋಷಕರು ಶಾಕ್ ಆಗಿದ್ದರು. ಇದನ್ನು ಕೇಳಿದ ಸ್ವತಃ ಪೊಲೀಸರು ಸಹ ಶಾಕ್ ಆಗಿದ್ದಾರೆ. ದಿನದ ಬಹುತೇಕ ಸಮಯವನ್ನು ವಿದ್ಯಾರ್ಥಿ ರೂಮಲ್ಲೇ ಕಳೆಯುತ್ತಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ದಿನ ಬೆಳಗಿನ ಜಾವ ಮೂರು ಗಂಟೆಗೆ ಎದ್ದು, ನನ್ನ ಪೋಟೋ ಕೊಡಿ ಎಂದು ಕೇಳಿದ್ದ. ಏನಾಗಿದೆ ನಿಂಗೆ ಹೋಗಿ ಮಲ್ಕೋ ಹೋಗು ಎಂದು ಪೋಷಕರು ಬೈದು ಕಳಿಸಿದ್ದರು. ಅದೇ ದಿನ ರಾಹುಲ್ ಪಿಸ್ತೂಲ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಸದ್ಯ ರಾಹುಲ್ ಸಾವಿನ ಬಗ್ಗೆ ಸದಾಶಿವನಗರ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ.
PublicNext
19/09/2021 01:57 pm