ಚಿತ್ರದುರ್ಗ: ಕಾಮುಕನೊಬ್ಬ ಮಾತು ಬಾರದ ಮೂಕ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ನಡೆದಿದೆ.
ಅತ್ಯಾಚಾರಕ್ಕೊಳಗಾಗಿರುವ ಮಹಿಳೆಯು ದಾವಣಗೆರೆಯ ತನ್ನ ಅಣ್ಣನ ಮನೆಗೆ ಹೋಗಿ ರಾತ್ರಿ ಕೊನೆಯ ಬಸ್ ಹತ್ತಿಕೊಂಡು ತನ್ನ ಊರಾದ ತುಪ್ಪದ ಹಳ್ಳಿ ಲಂಬಾಣಿ ಹಟ್ಟಿಗೆ ಹಿಂತಿರುಗುತ್ತಿದ್ದಳು. ಆರೋಪಿಯೂ ಕಡೂರಿನಿಂದ ತುಪ್ಪದ ಹಳ್ಳಿ ಗೇಟ್‌ಗೆ ಬಂದು ಬಸ್ ಇಳಿದಿದ್ದಾಳೆ. ಇವಳೊಬ್ಬಳೆ ಇರುವುದನ್ನು ಕಂಡ ಕಾಮುಕ ಅವಳನ್ನು ಹಿಂಬಾಲಿಸಿ ಪಕ್ಕದ ಅಡಿಕೆ ತೋಟಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆಂದು ತಿಳಿದು ಬಂದಿದೆ.
ಅತ್ಯಾಚಾರಿಯೂ ಮಹಿಳೆಗೆ ಕಚ್ಚಿ ಗಾಯಗೊಳಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಆರೋಪಿ ಕಾಮುಕನನ್ನು ಚಿತ್ರದುರ್ಗದ ಲಕ್ಷ್ಮೀ ಸಾಗರ ಗ್ರಾಮದವನು ಎಂದು ತಿಳಿದು ಬಂದಿದ್ದು, ಹೊಳಲ್ಕೆರೆ ಪೋಲಿಸರು ಬಂಧಿಸಿ ಅವನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ಜಿ. ರಾಧಿಕಾ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
PublicNext
17/09/2021 09:56 pm