ಹೈದರಾಬಾದ್ : 6 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರೋಪಿಯ ಶವ ತೆಲಂಗಾಣದ ಸ್ಟೇಷನ್ ಘನಪುರದಲ್ಲಿ ಪತ್ತೆಯಾಗಿದೆ ಎಂದು ಎಂದು ತೆಲಂಗಾಣ ಪೊಲೀಸ್ ಹೇಳಿದ್ದಾರೆ. ಸೆಪ್ಟೆಂಬರ್ 9 ರ ಗುರುವಾರದಂದು ಹೈದರಾಬಾದ್ ನ ಸೈದಾಬಾದ್ ನಲ್ಲಿ 6 ವರ್ಷದ ಬಾಲಕಿಯನ್ನು ನೆರೆಮನೆಯ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿ ಕೊಂದು ಪರಾರಿಯಾಗಿದ್ದ.
ಮಂಗಳವಾರದಂದು ತೆಲಂಗಾಣ ಸಚಿವ ಮಲ್ಲಾರೆಡ್ಡಿ ಆರೋಪಿಯನ್ನು ಎನ್ಕೌಂಟರ್ ನಲ್ಲಿ ಕೊಲ್ಲಲಾಗುವುದು ಎಂದು ಹೇಳಿದ್ದರು. "ನಾವು ಅತ್ಯಾಚಾರಿ ಮತ್ತು ಕೊಲೆಗಾರನನ್ನು ಹಿಡಿಯುತ್ತೇವೆ. ಆತನನ್ನು ಹಿಡಿದ ನಂತರ ಎನ್ಕೌಂಟರ್ ನಡೆಯಲಿದೆ," ಎಂದು ಸಚಿವ ರೆಡ್ಡಿ ಹೈದರಾಬಾದ್ ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು. ಈ ಹೇಳಿಕೆ ನೀಡಿದ್ದ ಎರಡು ದಿನಗಳ ನಂತರ ಅತ್ಯಾಚಾರ ಆರೋಪಿಯ ಶವ ರೈಲ್ವೇ ಹಳಿ ಮೇಲೆ ಪತ್ತೆಯಾಗಿದೆ. ಸದ್ಯ ಪೊಲೀಸರು ಆರೋಪಿ ರೈಲಿನ ಎದುರು ಜಿಗಿದು ಓಡಿಹೋಗಲು ಯತ್ನಿಸುತ್ತಿದ್ದ ವೇಳೆ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಿದ್ದಾರೆ.
ಅತ್ಯಾಚಾರ ಮತ್ತು ಕೊಲೆ ಮಾಡಿದ ಪಾಪಿ ಪತ್ತೆ ಮಾಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸಲು ಘೋಷಿಸಿ, ಶಂಕಿತ ಆರೋಪಿ ಪಲ್ಲಕೊಂಡ ರಾಜು ಫೋಟೋವನ್ನು ಬಿಡುಗಡೆ ಮಾಡಿದ್ದರು.
PublicNext
16/09/2021 03:44 pm