ಗದಗ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡಿದಿದೆ.
ಹಳೇ ವೈಷಮ್ಯದ ಹಿನ್ನಲೆ ನಾಲ್ವರು ಯುವಕರು ಕೂಡಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು, ಅಭಿಷೇಕ್, ಕಿರಣ, ಅರುಣ, ಸಾಗರ ಎಂಬವರಿಂದ ಪ್ರಶಾಂತ ಎನ್ನುವ ವ್ಯಕ್ತಿಯ ಹಲ್ಲೆ ಮಾಡಲಾಗಿದೆ.
ನಿನ್ನೆ ರಾತ್ರಿ ಗಣೇಶ ಮೂರ್ತಿ ವಿಸರ್ಜನೆ ಮಾಡಿ ಮರಳಿ ಬರುವಾಗ ಘಟನೆ ನಡೆದಿದ್ದು, ನಾಲ್ವರು ಯುವಕರು ಹಲ್ಲೆ ಮಾಡಿದ್ದಾರೆಂದು ಪ್ರಶಾಂತ ಆರೋಪಿಸಿದ್ದಾರೆ.
ಇನ್ನೂ ಹಲ್ಲೆಗೊಳಗಾದ ಪ್ರಶಾಂತ ಸದ್ಯ ಗದಗ ಜೀಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲ್ಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ರಾತ್ರಿ ವೇಳೆ ಪೊಲಿಸರ ಗಸ್ತು ಇದ್ದರೂ ನಡಿಯಿತಾ ಮಾರಾಮಾರಿ ಎಂಬುವಂತ ಆತಂಕ ಎದುರಾಗಿದೆ. ಅಲ್ಲದೆ ಲಕ್ಷ್ಮೇಶ್ವರ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
15/09/2021 12:06 pm