ಕಲಬುರಗಿ: ತಾಯಿಯೊಬ್ಬಳು ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಮಗನನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಮದನಾ ಗ್ರಾಮದಲ್ಲಿ ನಡೆದಿದೆ.
ನಾಗೇಶ್ ರಾಮು ಮದ್ದೂರ (25) ಕೊಲೆಯಾದ ಮಗ. ನಾಗೇಶ್‌ನನ್ನು ತಾಯಿ ಯಲ್ಲಮ್ಮ, ಆಕೆಯ ಪ್ರಿಯಕರ ಭರತಕುಮಾರ ಶರಣಯ್ಯಸ್ವಾಮಿ ಹಾಗೂ ಯಲ್ಲಮ್ಮಳ ಮಗಳು ಅನಿತಾ ರಾಮು ಮದ್ದೂರ ಮೂವರು ಸೇರಿ ನೇಣು ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ.
ಮುನಕನಪಲ್ಲಿಯ ಭರತಕುಮಾರ ಶರಣಯ್ಯಸ್ವಾಮಿ ಹಾಗೂ ಯಲ್ಲಮ್ಮ ಕಳೆದ ಐದಾರು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು. ವಿಷಯ ಯಲ್ಲಮ್ಮನ ಮಗ ನಾಗೇಶನಿಗೆ ತಿಳಿದು ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಈ ವೇಳೆ ಯಲ್ಲಮ್ಮ ತನ್ನ ಮಗಳು ಅನಿತಾ, ಪ್ರಿಯಕರ ಭರತಕುಮಾರ್ ಜೊತೆಗೂಡಿ ನಾಗೇಶ್‌ನನ್ನು ಕೊಲೆ ಮಾಡಿದ್ದಾರೆ.
ಘಟನೆ ಸಂಬಂಧ ತನಿಖೆ ಕೈಗೊಂಡ ಮುಧೋಳ ಪಿಐ ಆನಂದರಾವ್ ತಲೆಮರೆಸಿಕೊಂಡಿದ್ದ ಮೂವರು ಕೊಲೆಗಡುಕರ ಕೃತ್ಯವನ್ನು ಬಯಲಿಗೆ ಎಳೆದಿದ್ದಾರೆ. ಈ ಸಂಬಂಧ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
13/09/2021 03:38 pm