ಚಿತ್ರದುರ್ಗ : ಗಣೇಶ ವಿಸರ್ಜನೆ ಮಾಡಿ ಈಜಲು ನೀರಿನಲ್ಲಿ ಧುಮುಕಿದ ಯುವಕನೊಬ್ಬ ಮೇಲೆ ಬರದೇ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕೊಂಡಾಪುರ ಗ್ರಾಮದಲ್ಲಿ ನಡೆದಿದೆ. ರಾಜು ( 27) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಗ್ರಾಮದಲ್ಲಿ ಶುಕ್ರವಾರ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು.
ಮೂರನೇ ದಿನ ಭಾನುವಾರ ಗಣೇಶನನ್ನು ಭದ್ರಾ ಮೇಲ್ದಂಡೆ ಕಾಲುವೆಯ ನೀರಿನಲ್ಲಿ ವಿಸರ್ಜನೆ ಮಾಡಲು 15 ರಿಂದ 20 ಜನ ತಂಡವೊಂದು ತೆರಳಿದ್ದರು. ಗಣೇಶ ವಿಸರ್ಜನೆ ಆದ ನಂತರ ರಾಜು ಈಜಲು ನೀರಿಗೆ ಧುಮಕಿದ್ದು, ಮೇಲೆ ಬರದೇ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಅಗ್ನಿಶಾಮಕ ದಳದವರು ಮೃತ ದೇಹಕ್ಕಾಗಿ ಹುಡುಕಾಟ ನಡೆಸಿ, ಮೃತ ದೇಹವನ್ನು ನೀರಿನಿಂದ ಹೊರ ತೆಗೆದಿದ್ದಾರೆ. ಹೊಸದುರ್ಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
PublicNext
12/09/2021 09:38 pm