ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುರಿ ಮೇಯಿಸುವ ವಿಚಾರದಲ್ಲಿ ಗಲಾಟೆ

ಚಿತ್ರದುರ್ಗ: ಕುರಿ ಮೇಯಿಸುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಒಂದು ಗುಂಪಿನವರು ಸೇರಿ ಓರ್ವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ‌ ನಡೆದಿದೆ.

ತಾಲೂಕಿನ ಧರ್ಮಪುರ ಹೋಬಳಿಯ ಕುರಿದಾಸಯ್ಯನಹಟ್ಟಿ ಗ್ರಾಮದಲ್ಲಿ ಒಂದು ಗುಂಪಿನವರು ಮೇಯಿಸುತ್ತಿದ್ದ ಜಾಗದಲ್ಲಿ ಇನ್ನೋಬ್ಬನ ಕುರಿಗಳು ಹೋಗಿ ಮೇವು ತಿಂದಿರುವುದಕ್ಕೆ ಗಲಾಟೆ ನಡೆಯಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಆ ಗುಂಪಿನವರು ತಿಮ್ಮರಾಜು ಎಂಬ ಯುವಕನಿಗೆ ಕಲ್ಲು, ಕೋಲುಗಳಿಂದ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಹಲ್ಲೆಗೊಳಗಾದ ತಿಮ್ಮರಾಜುಗೆ ಎರಡು ಹಲ್ಲುಗಳು ಮುರಿದು ಹೋಗಿವೆ. ತೆರೆಯಲ್ಲಿ ರಕ್ತ ಸುರಿದು, ಗಾಯಗಳಾಗಿದ್ದು ಇತನ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಹಿರಿಯೂರು ಸರ್ಕಾರಿ ಆಸ್ಪತ್ರೆಯಿಂದ ಚಿತ್ರದುರ್ಗ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ ಪ್ರಕರಣಕ್ಕೆ ಸಂಬಂಧಸಿದಂತೆ ಅಬ್ಬಿನಹೊಳೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Edited By : Nagesh Gaonkar
PublicNext

PublicNext

12/09/2021 08:11 pm

Cinque Terre

152.67 K

Cinque Terre

0