ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈ ರೇಪ್ ಪ್ರಕರಣ: ಸಂತ್ರಸ್ತ ಮಹಿಳೆ ಸಾವು

ಮುಂಬೈ: ನಗರದ ಸಾಕಿನಾಕಾ ಪ್ರದೇಶದ ರಸ್ತೆ ಪಕ್ಕ ನಿಲ್ಲಿಸಲಾಗಿದ್ದ ಟೆಂಪೋ ಒಂದರಲ್ಲಿ ಕಾಮುಕನೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಿದ್ದ. ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮುಂಬೈನ ಸಾಕಿನಾಕಾ ಪ್ರದೇಶದ ಕೈರಾನಿ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಗೆ ಚಿತ್ರ ಹಿಂಸೆ ನೀಡಿ, ಬಳಿಕ ಆಕೆಯನ್ನು ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸುವಷ್ಟರಲ್ಲಿ ಕೃತ್ಯ ನಡೆದಿದೆ. ಆರೋಪಿಯು ಮಹಿಳೆಗೆ ಥಳಿಸಿ, ಹಲ್ಲೆ ಮಾಡಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಪೊಲೀಸರು ರಾಜವಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಸತತ 33 ಗಂಟೆಗಳ ಜೀವನ್ಮರಣ ಹೋರಾಟದ ಬಳಿಕ ಮತಪಟ್ಟಿದ್ದಾರೆ.

Edited By : Nagaraj Tulugeri
PublicNext

PublicNext

11/09/2021 02:53 pm

Cinque Terre

67.95 K

Cinque Terre

13