ಅವನ್ನೊಬ್ಬ ಭಗ್ನ ಪ್ರೇಮಿ ತನ್ನ ಪ್ರೇಯಸಿಯನ್ನು ಇನ್ನೊಬ್ಬನ ಜೊತೆ ಕಂಡು ಕೆಂಡಾಮಂಡಲವಾಗಿದ್ದ. ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಗೊಂಡು ಹುಡುಗಿಯ ಖಾಸಗಿ ಭಾಗಕ್ಕೆ ಖಾರದ ಪುಡಿ ಹಚ್ಚಿ, ತಲೆ ಮೇಲೆ ಕಲ್ಲು ಹಾಕಿ ಭೀಕರವಾಗಿ ಸಾಯಿಸಿರುವ ಘಟನೆ ಮಧ್ಯಪ್ರದೇಶದ ಜಬಲ್ ಪುರದಲ್ಲಿ ನಡೆದಿದೆ.
ಬೇಡ ಬೇಡ ಎಂದರೂ ತಾನು ಮನೆಯಲ್ಲಿ ಇರದಾಗ ಪರ ಪುರುಷನ ಜತೆ ಸಂಪರ್ಕ ಹೊಂದಿದ್ದಳು ಎಂಬ ಅನುಮಾನದ ಮೇಲೆ ಪ್ರೇಯಸಿಯನ್ನು ಹಿಂಸಿಸಿ, ತಲೆಯ ಮೇಲೆ ಕಲ್ಲುಹಾಕಿ ಸಾಯಿಸಿದ ನಂತರ ಆಕೆಯ ಖಾಸಗಿ ಭಾಗಕ್ಕೆ ಖಾರದ ಪುಡಿ ಹಚ್ಚಿ ವಿಕೃತಿ ಮೆರೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಪಪ್ಪು ಗಧೆವಾಲ್ ಎಂದು ಗುರುತಿಸಲಾಗಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಸಂತ್ರಸ್ತೆಯನ್ನು ಶಾಲಿನಿ ಎಂದು ಗುರುತಿಸಲಾಗಿದ್ದು, ಮೃತಳ ಶರೀರ ಆರೋಪಿ ಗೋಪಾಲ್ ನ ಮನೆಯೊಳಗೆ ಪತ್ತೆಯಾಗಿದೆ.
ಶವದ ಪಕ್ಕದಲ್ಲಿ ಪತ್ರವೊಂದನ್ನು ಬರೆದಿಡಲಾಗಿದ್ದು, ಅದರಲ್ಲಿ ಪ್ರೀತಿಯಲ್ಲಿ ಮೋಸ ಮಾಡಿದರೆ ಹೀಗೇ ಆಗುತ್ತದೆ ಎಂದು ಹಿಂದಿ ಭಾಷೆಯಲ್ಲಿ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ಸ್ಥಳೀಯರು ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ ಶಾಲಿನಿ ಮತ್ತು ಪಪ್ಪು ಗಧೆವಾಲ್ ಇಬ್ಬರೂ ಲಿವಿಂಗ್ ರಿಲೇಷನ್ ಶಿಪ್ ನಲ್ಲಿ ಇದ್ದರು. ಪಪ್ಪು ಮನೆಯಲ್ಲಿ ಇಲ್ಲದ ವೇಳೆ ವೀರ್ ಎಂಬ ಇನ್ನೊಬ್ಬ ಹುಡುಗನ ಜೊತೆ ಶಾಲಿನಿ ಸಂಪರ್ಕ ಮಾಡುತ್ತಿದ್ದಳು. ಇದೇ ಸಿಟ್ಟಿಗೆ ಪಪ್ಪು ಪ್ರೇಯಸಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.
PublicNext
08/09/2021 06:59 pm